ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪುಟ್ಟರಾಜ ಕವಿ ಗವಾಯಿ ಜಯಂತಿ ಆಚರಣೆ

Published 3 ಮಾರ್ಚ್ 2024, 15:50 IST
Last Updated 3 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಬೀದರ್‌: ನಗರದ ವಿವೇಕಾನಂದ ಕಾಲೊನಿಯಲ್ಲಿ ಭಾನುವಾರ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿಂದ ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ 110ನೇ ಜಯಂತಿ ಆಚರಿಸಲಾಯಿತು.

ಸಂಘದ ಗೌರವ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ, ಅಂಧತ್ವವನ್ನು ಮೆಟ್ಟಿನಿಂತು, ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ಪುಟ್ಟರಾಜ ಕವಿ ಗವಾಯಿಗಳು. ಅಂಧರು, ಅನಾಥರು, ದೀನ ದಲಿತರಿಗೆ ಸಂಗೀತ ವಿದ್ಯೆ ಕಲಿಸಿ ಅವರಿಗೆ ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟ ಮಹಾಪುರುಷರು ಎಂದು ವರ್ಣಿಸಿದರು.

ಗವಾಯಿಗಳ ವ್ಯಕ್ತಿತ್ವ ಅಸಾಧಾರಣವಾದುದು. ಅವರು ಹಿಂದಿ ಭಾಷೆಯಲ್ಲಿ ರಚಿಸಿದ ಬಸವ ಪುರಾಣಕ್ಕೆ ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಭಾವಿತರಾಗಿದ್ದರು. ಗವಾಯಿಗಳನ್ನು ನವದೆಹಲಿಗೆ ಕರೆಸಿ ಸನ್ಮಾನಿಸಿದ್ದರು ಎಂದು ನೆನಪಿಸಿದರು.

ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಕಾರ್ಯದರ್ಶಿ ದಾನಿ ಬಾಬುರಾವ, ಬಿ.ಎಸ್.ಬಿರಾದಾರ, ಧನರಾಜ ಸ್ವಾಮಿ, ಸುರೇಶ ಚಿಟಗೊಪಕರ್, ಮುರಳಿ ನಾಶಿ, ಪಂಚಾಕ್ಷರಿ ಕಲ್ಮಠ, ಸತೀಶ ಸ್ವಾಮಿ, ರಾಜೇಶ್ವರಿ, ಶಾಂಭವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT