ಸಂಜೆ 4.30ರ ಸುಮಾರಿಗೆ ಆರಂಭಗೊಂಡ ಜೋರು ಮಳೆ ಸಂಜೆ ಆರು ಗಂಟೆಯ ವರೆಗೆ ಎಡೆಬಿಡದೇ ಸುರಿಯಿತು. ಬಿರುಸಿನ ಮಳೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ನೀರು ಸಂಗ್ರಹಗೊಂಡು ವಾಹನಗಳ ಸಂಚಾರ ನಿಧಾನಗೊಂಡಿತು. ತಾಲ್ಲೂಕಿನ ಜನವಾಡ, ಮರಕಲ್, ಅಲಿಯಂಬರ್, ಅಷ್ಟೂರ್, ಚಿಟ್ಟಾ, ಅಮಲಾಪುರ, ಘೋಡಂಪಳ್ಳಿ, ಶಹಾಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ.