ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಡಿಜೆ ಹಾಕಿದ್ದರು. ರ್‍ಯಾಂಡಮ್ ಆಗಿ ಹಾಡುಗಳನ್ನು ಹಾಕುತ್ತಿದ್ದರು. ಕೊನೆಯಲ್ಲಿ ಜೈಶ್ರೀರಾಮ್ ಹಾಡು ಹಾಕಿದರು. ಅದು ಉದ್ದೇಶಪೂರ್ವಕವಾಗಿ ಆಗಿರಲಿಲ್ಲ. ಆಗ ಅನ್ಯ ಕೋಮಿನ ಸುಮಾರು 25ರಿಂದ 30 ವಿದ್ಯಾರ್ಥಿಗಳು ಡಿ.ಜೆ ವೈರ್ ಕಿತ್ತು ಹಾಕಿ ಏಳೆಂಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ವೀರೇಂದ್ರ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಸಂಜೆ ಕೇಸ್ ಕೊಟ್ಟಿದ್ದೆವು. ಆದರೆ, ಹಲ್ಲೆ ನಡೆಸಿದವರು ತಮ್ಮ ಮೇಲೆ ಹಲ್ಲೆ ಆಗಿದೆ ಎಂದು ಪ್ರತಿ ದೂರು ಕೊಟ್ಟಿದ್ದಾರೆ. ಸರ್ಕಾರ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಿಂದೆಯೂ ಕಾಲೇಜಿನಲ್ಲಿ ಈ ರೀತಿಯ ಘಟನೆಗಳಾಗಿವೆ.
–ವೀರೇಂದ್ರ, ಜಿಎನ್‌ಡಿ ಕಾಲೇಜು ವಿದ್ಯಾರ್ಥಿ
ಇದೇನು ಪಾಕಿಸ್ತಾನನಾ?
ನಮ್ಮ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ಈ ರೀತಿಯ ಘಟನೆಗಳು ಆಗುತ್ತಿವೆ. ನಮ್ಮ ಹಿಂದೂ ವಿದ್ಯಾರ್ಥಿಗಳನ್ನು ಗುರುತಿಸಿ ಈ ರೀತಿ ಮಾಡುತ್ತಿದ್ದಾರೆ. ಜೈ ಶ್ರೀರಾಮ್ ಹಾಡು ಹಾಕಿರುವುದಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಹೊಡೆದಿದ್ದಾರೆ. ಅಲ್ಲಾಹು ಅಕ್ಬರ್ ಕೂಡ ಹೇಳಿದ್ದಾರೆ. ಇದೇನು ಪಾಕಿಸ್ತಾನನಾ? ಇದು ಇಂಡಿಯಾ. ಇದಕ್ಕೆ ಕಾರಣರಾದವರನ್ನು ಜೈಲಿಗೆ ಹಾಕಬೇಕು. ಅವರೆಲ್ಲ ಹೊರಗಿದ್ದಾರೆ. ನ್ಯಾಯ ಕೊಡಬೇಕು.