ಭಾನುವಾರ, ಮೇ 22, 2022
26 °C

ರಾಮಾಯಣ ಓದಿದರೆ ಬಾಳಿಗೆ ಬೆಳಕು; ಜೈಕಿಶನ್ ಬಿಯಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ರಾಮಾಯಣ ಗ್ರಂಥ ಓದುವುದರಿಂದ ಪ್ರತಿಯೊಬ್ಬರ ಬಾಳು ಬೆಳಗುತ್ತದೆ ಎಂದು ಉದ್ಯಮಿ ಜೈಕಿಶನ್ ಬಿಯಾಣಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಮ (ಬಾಲಾಜಿ) ಮಂದಿರದಲ್ಲಿ ಭಾನುವಾರ ಶ್ರೀರಾಮ ನವಮಿ ಪ್ರಯುಕ್ತ ಮಾರವಾಡಿ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ‌‌ಮಾತನಾಡಿದರು.

ರಾಮಾಯಣದ ಕಥೆಯು ನಿತ್ಯ ನೂತನವಾಗಿದೆ. ರಾಮಾಯಣ  ಓದುವುದರಿಂದ ಕುಟುಂಬ ಸದಸ್ಯರು ಹೇಗೆ ಬಾಳಬೇಕು? ಮನೆಯ ಯಜ ಮಾನನ ಕರ್ತವ್ಯ ಏನು? ರಾಜ್ಯ ವನ್ನಾಳುವ ರಾಜರ ಜವಾಬ್ದಾರಿ ಯಾವುವು? ಪ್ರಜೆಗಳ ಕರ್ತವ್ಯಗಳು ಏನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ ಎಂದರು.

ಬದುಕಿನ ಸೂತ್ರಗಳಾದ ಶಾಂತಿ, ತ್ಯಾಗ, ನೆಮ್ಮದಿಯನ್ನು ರಾಮಾಯಣ ದಿಂದ ಕಲಿಯಬಹುದು ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಹಲವು ಮುಖಂಡರು ರಾಮ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿದರು.

ಮುಖಂಡರಾದ ಶ್ರೀವಲ್ಲಭ ಲೋಯಾ, ಸುರೇಶ ಮಾಲಪಾಣಿ, ಶ್ರೀಕಿಶನ ಲೋಯಾ, ಭಗವತಿ ಪ್ರಸಾದ ಶರ್ಮಾ, ವಲ್ಲಭ ಹೇಡಾ, ಸುಶೀಲ ಶರ್ಮಾ, ಪುನಮಚಂದ ತಿವಾರಿ, ಸುನಿಲ್‌ ಲಖೇರಾ, ವಿಜಯ ರಾಠಿ, ಜಯಕುಮಾರ ನಬೆರಿಯಾ, ಪುರುಷೋತ್ತಮ ಶರ್ಮಾ, ಹೇಮಂತ ನಬೆರಿಯಾ, ರಾಜು ಖಂಡೆಲವಾಲ್‌, ಮನೋಜ ಲೊಯಾ, ನರಸಿಂಗ ಭಟ್ಟದ, ನವಲ ಲೋಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು