ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ, ತಾ.ಪಂ ಚುನಾವಣೆಗೆ ಅಣಿಯಾಗಿ

ಬಹುಜನ ಸಮಾಜ ಪಕ್ಷದ ಸಮಾವೇಶದಲ್ಲಿ ರಾಮಜಿ ಗೌತಮ ಸಲಹೆ
Last Updated 5 ಅಕ್ಟೋಬರ್ 2021, 14:15 IST
ಅಕ್ಷರ ಗಾತ್ರ

ಬೀದರ್: ಕಾರ್ಯಕರ್ತರು ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಣಿಯಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ರಾಮಜಿ ಗೌತಮ ಹೇಳಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ‘ಬಹುಜನರ ನಡಿಗೆ ಅಧಿಕಾರದ ಕಡೆಗೆ’ ಘೋಷವಾಕ್ಯದಡಿ ಇಲ್ಲಿಯ ಪ್ರತಾಪನಗರದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಕಿರೀಟ ಸ್ಥಾನದಲ್ಲಿರುವ ಬೀದರ್ ಬಹುಸಂಖ್ಯಾತರ ಜಿಲ್ಲೆಯಾಗಿದೆ. ಹೀಗಾಗಿ ಬೂತ್‍ಮಟ್ಟದಿಂದ ಪಕ್ಷದ ಸಂಘಟನೆ ಬಲಪಡಿಸಲು ಒತ್ತು ಕೊಡಬೇಕು ಎಂದು ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ಸುರೇಂದ್ರ ಸಿಂಗ್ ಕೋಲಾರಿಯಾ, ದಿನೇಶ ಗೌತಮ, ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಬಿ. ವಾಸು, ಕಾರ್ಯದರ್ಶಿ ದತ್ತು ಸೂರ್ಯವಂಶಿ, ಸೈಯದ್ ಹುಲ್ ಹಕ್ ಬುಖಾರಿ, ಅಂಕುಶ ಗೋಖಲೆ, ಜಿಲ್ಲಾ ಘಟಕದ ಅಧ್ಯಕ್ಷ ಜಮೀಲ್ ಅಹಮ್ಮದ್ ಖಾನ್, ಸಂಯೋಜಕ ಸ್ವಾಮಿದಾಸ ಕೆಂಪೆನೋರ, ಲಕ್ಷ್ಮಣ ಬಿ. ಉಪಸ್ಥಿತರಿದ್ದರು. ಸಂಗಮೇಶ ಹಡಪದ ನಿರೂಪಿಸಿದರು. ಫಿರ್ದೋಸ್‍ಖಾನ್ ಪಟೇಲ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT