ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 100 ಸಾಕ್ಷರತೆ: ರೋಟರಿ ಗುರಿ

ಕಂಪ್ಯೂಟರ್ ವಿತರಣೆ ಸಮಾರಂಭದಲ್ಲಿ ಬಸವರಾಜ ಧನ್ನೂರ ಹೇಳಿಕೆ
Last Updated 30 ಜೂನ್ 2022, 2:15 IST
ಅಕ್ಷರ ಗಾತ್ರ

ಬೀದರ್: ‘ದೇಶದಲ್ಲಿಯ ಸಾಕ್ಷರತೆ ಪ್ರಮಾಣವನ್ನು ಶೇ 100ಕ್ಕೆ ತಲುಪಿಸುವುದು ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಗುರಿ’ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಸೆವೆನ್ ಏರಿಯಾಸ್ ಆಫ್ ಫೋಕಸ್ ಚೇರ್‌ಮನ್‌ ಬಸವರಾಜ ಧನ್ನೂರ ಹೇಳಿದರು.

ಜಿಲ್ಲೆಯ ರೋಟರಿ ಕ್ಲಬ್‍ಗಳ ವತಿಯಿಂದ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ನಡೆದ ಹೆಲ್ಪ್ ಎಜ್ಯುಕೇಟ್ ಕಾರ್ಯಕ್ರಮದ ಅಂಗವಾಗಿ ಇನ್ಫೊಸಿಸ್ ಸಂಸ್ಥೆ ವತಿಯಿಂದ ನೀಡಲಾದ 221 ಕಂಪ್ಯೂಟರ್‌ಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಇಂಡಿಯಾ ಲಿಟ್ರಸಿ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರದಾದ್ಯಂತ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆ ವಿಶ್ವಾಸಾರ್ಹತೆಗೆ ಹೆಸರಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಪರ್ಕ ಜಾಲವನ್ನು ಹೊಂದಿದೆ. ಇದೇ ಕಾರಣಕ್ಕಾಗಿ ಇನ್ಫೊಸಿಸ್ ಸಂಸ್ಥೆಯು ಕೊಡುಗೆಯಾಗಿ ಕೊಟ್ಟಿರುವ ಕಂಪ್ಯೂಟರ್‌ಗಳನ್ನು ಸರ್ಕಾರಿ ಕಾಲೇಜುಗಳಿಗೆ ಮುಟ್ಟಿಸುವ ಜವಾಬ್ದಾರಿಯನ್ನು ರೋಟರಿ ಸಂಸ್ಥೆಗೆ ವಹಿಸಲಾಗಿದೆ ಎಂದರು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್ ಹಾಗೂ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ ಅವರು,‘ವಿದ್ಯಾರ್ಥಿಗಳು ಕಂಪ್ಯೂಟರ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಪ್ರಕಾಶ ಟೊಣ್ಣೆ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಅಧ್ಯಕ್ಷ ಪ್ರೊ.ಎಸ್.ಬಿ.ಚಿಟ್ಟಾ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ.ನಿತೇಶಕುಮಾರ ಬಿರಾದಾರ ಹಾಗೂ ಇನ್ನರ್ ವ್ಹೀಲ್ ಕ್ಲಬ್‍ನ ಮಹಾದೇವಿ ಬೀದೆ ಮಾತನಾಡಿದರು.

ಪ್ರಾಚಾರ್ಯ ಪ್ರಭು ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ, ವಿವಿಧ ರೋಟರಿ ಕ್ಲಬ್‍ಗಳ ಸದಸ್ಯರಾದ ಹಾವಶೆಟ್ಟಿ ಪಾಟೀಲ, ವೀರಶೆಟ್ಟಿ ಮಣಗೆ, ನಿತಿನ್ ಕರ್ಪೂರ, ರಾಜೇಂದ್ರ ಅಗ್ರವಾಲ್, ಸುಜಾತಾ ಕಾಮಶೆಟ್ಟಿ, ಉಮಾ ಗಾದಗೆ, ಸುರೇಖಾ ಶೇರಿಕಾರ್, ಕಾಮಶೆಟ್ಟಿ ಚಿಕ್ಕಬಸೆ ಹಾಗೂ ಶಿವಕುಮಾರ ಪಾಖಲ್ ಇದ್ದರು. ಉಪನ್ಯಾಸಕ ಶಿವಕುಮಾರ ಕಟ್ಟೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT