ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ, ಕಾಲೇಜು ವಾಹನ; ಆರ್‌ಟಿಒ ಕಟ್ಟುನಿಟ್ಟಿನ ಸೂಚನೆ

Published 12 ಜೂನ್ 2024, 16:25 IST
Last Updated 12 ಜೂನ್ 2024, 16:25 IST
ಅಕ್ಷರ ಗಾತ್ರ

ಬೀದರ್‌: ‘ಎಲ್ಲ ಶಾಲಾ, ಕಾಲೇಜಿನವರು ನಿಯಮದ ಪ್ರಕಾರ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟು, ಓಡಿಸಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶೀರೋಳಕರ್ ತಿಳಿಸಿದ್ದಾರೆ.

ಶಾಲಾ ವಾಹನದ ದಾಖಲಾತಿಗಳನ್ನು ಜತೆಯಲ್ಲಿ ಇರಿಸಿಕೊಳ್ಳಬೇಕು. ವಾಹನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಬೇಕು. ಜಿಪಿಎಸ್ ಇರಬೇಕು. ಪ್ರಥಮ ಚಿಕಿತ್ಸೆ ಬಾಕ್ಸ್ ಅಳವಡಿಸಬೇಕು. ತುರ್ತು ನಿರ್ಗಮನ ದ್ವಾರ ಹೊಂದಿರಬೇಕು. ರೆಟ್ರೋ ರಿಫ್ಲೆಕ್ಟರ್, ಫಿಟ್‌ನೆಟ್ ಪ್ರಮಾಣ ಪತ್ರ, ವಿಮೆ ಪತ್ರ ಹೊಂದಿರಬೇಕು. ಎಮಿಶನ್ ಪ್ರಮಾಣ ಪತ್ರವಿರಬೇಕು. ಶಾಲೆ ಅನುಮತಿ ಪ್ರಮಾಣ ಪತ್ರ ಇರಬೇಕು. ಸೀಟುಗಳು ಕಂಫರ್ಟ್ ಆಗಿರಬೇಕು. ಚಾಲಕರು ಡ್ರೈವಿಂಗ್‌ ಲೈಸೆನ್ಸ್ ಹೊಂದಿರಬೇಕು ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲ ದಾಖಲಾತಿಗಳ ಜತೆಗೆ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಶಾಲಾ ವಾಹನದಲ್ಲಿ ಹೆಣ್ಣು ಮಕ್ಕಳು ಪ್ರಯಾಣಿಸುತ್ತಿದ್ದರೆ, ವಾಹನಗಳಲ್ಲಿ ಮಹಿಳಾ ನಿರ್ವಾಹಕಿಯರನ್ನು ಕಡ್ಡಾಯವಾಗಿ ಇರಿಸಬೇಕು. 15 ವರ್ಷಗಳ ನಂತರ ಶಾಲಾ ವಾಹನಗಳು ಓಡಿಸುವಂತಿಲ್ಲ. ಒಂದು ವಾರದಲ್ಲಿ ಎಲ್ಲವನ್ನೂ ಸರಿಪಡಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ವಾಹನಗಳ ನೋಂದಣಿ ಸಂಖ್ಯೆ ಸಹಿತ ವರದಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಸಿಎಂವಿ ಆ್ಯಕ್ಟ್ 1988 ರಂತೆ ಕ್ರಮ ಕೈಗೊಳ್ಳಲಾಗುವುದು. ಶಾಲಾ ಕಾಲೇಜಿನ ಎಲ್ಲ ವಾಹನಗಳ ನಂಬರ್‌ಗಳನ್ನು ನಮೂದಿಸಿ, ಕಚೇರಿಗೆ ಒಂದು ವಾರದ ಒಳಗಾಗಿ ದೃಢೀಕರಣ ಪತ್ರ ನೀಡಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT