ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೌಟ್, ಗೈಡ್ಸ್‌ನಿಂದ ಸ್ವಾವಲಂಬನೆ ಸಾಧ್ಯ

ರಾಜ್ಯ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜೂಜಾರೆ ಮಾಹಿತಿ
Last Updated 22 ಏಪ್ರಿಲ್ 2022, 3:54 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸ್ಕೌಟ್‌ ಮತ್ತು ಗೈಡ್ಸ್‌ನಿಂದ ಸ್ವಾವಲಂಬನೆ, ಸಾಮಾಜಿಕ ಕಳಕಳಿಯ ಮನೋಭಾವ ಬೆಳೆಯುತ್ತದೆ’ ಎಂದು ರೋವರಿಂಗ್ ಮತ್ತು ರೆಂಜರಿಂಗ್ ರಾಜ್ಯ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜೂಜಾರೆ ಹೇಳಿದ್ದಾರೆ.ನಗರದ ಡಾ.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಬೇಸಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಸಂಸ್ಥೆಯು ಎಲ್ಲ ಶಾಲಾ ಕಾಲೇಜುಗಳಲ್ಲಿ ಘಟಕಗಳನ್ನು ಆರಂಭಿಸಿ ಆಂದೋಲನದ ರೂಪದಲ್ಲಿ ಕಾರ್ಯಗೈಯ್ಯುತ್ತಿದೆ’ ಎಂದರು.

ಸ್ಕೌಟ್‌ ಮತ್ತು ಗೈಡ್ಸ್ ತಾಲ್ಲೂಕು ಘಟಕದ ಉಪಾಧ್ಯಕ್ಷ ಡಾ.ಜೈಶೇನ ಪ್ರಸಾದ ಮಾತನಾಡಿ,‘ಸಂಸ್ಥೆಯು ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಐಕ್ಯತೆ, ಸಮಗ್ರತೆ, ಅಖಂಡತೆ ಕಾಯ್ದುಕೊಳ್ಳುವುದಕ್ಕೆ ಯುವ ಶಕ್ತಿಯನ್ನು ತಯಾರು ಮಾಡುತ್ತಿದೆ’ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಅನಿಲ ಶಾಸ್ತ್ರೀ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಡಾ.ಭರಶೆಟ್ಟಿ, ತರಬೇತಿ ಆಯುಕ್ತ ಬಾಬುರಾವ್ ನಿಂಬೂರೆ, ಜಿಲ್ಲಾ ಸಂಘಟಕ ಕಲ್ಯಾಣರಾವ್ ಚಳಕಾಪುರೆ, ನಾಗರತ್ನ ಪಾಟೀಲ, ತಾಲ್ಲೂಕು ಅಧ್ಯಕ್ಷ ಏಜಾಜ್ ಪಟೇಲ್, ಸಿದ್ಧರಾಜ ಬೋಗಾರ, ಸಂದೀಪಾನ ಗಾಯಕವಾಡ, ಪರಮೇಶ್ವರ ಢೋಲೆ ಹಾಗೂ ಲಕ್ಷ್ಮಣ ಇದ್ದರು.ನಾಗೇಶ ಡೊಂಗರೆ ಸ್ವಾಗತಿಸಿದರು.

ಶಿವಶರಣಪ್ಪ ದೇಸಾಯಿ ನಿರೂಪಿಸಿದರು. ಶ್ರೀಧರ ಛಲವಾದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT