ಶುಕ್ರವಾರ, ಸೆಪ್ಟೆಂಬರ್ 25, 2020
24 °C
- ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ

ಪಾಪ, ಕರ್ಮಗಳಿಗೆ ಸ್ವಾರ್ಥ ಕಾರಣ

ಅಮೃತವಾಣಿ–3 Updated:

ಅಕ್ಷರ ಗಾತ್ರ : | |

Prajavani

ಮಾನವ ಜನ್ಮದಿಂದಲೇ ಸ್ವಾರ್ಥಿ. ಅನೇಕ ಪಾಪ, ಕರ್ಮಗಳಿಗೆ ಮೂಲ ಕಾರಣ ಈ ಸ್ವಾರ್ಥ. ಸ್ವಾರ್ಥಕ್ಕಾಗಿಯೇ ಏನೆಲ್ಲವನ್ನು ಮಾಡುತ್ತಾನೆ. ನಾನು- ನನ್ನವರು ಸುಖವಾಗಿರಲೆಂದು ಕಳ್ಳತನಗೈಯುತ್ತಾನೆ. ಕಳ್ಳತನದಿಂದ ಯಾರ ಮನೆಯ ವಸ್ತು ತಂದಿರುತ್ತೇವೆಯೋ ಅವರ ಮನಸ್ಸಿಗೆ ಹಿಂಸೆ ಮಾಡಿದಂತಾಗುವುದು. ಕಳ್ಳತನದಲ್ಲಿ ಹಿಂಸೆ, ಸ್ತೇಯ ಎರಡೂ ಇರುತ್ತವೆ. ಅಂತೆಯೇ ಬಸವೇಶ್ವರರು ಕಳಬೇಡವೆಂದು ತಮ್ಮ ಸಪ್ತ ಸೂತ್ರದಲ್ಲಿ ಮೊದಲಿರಿಸಿದ್ದಾರೆ.

ಅನ್ಯಾಯ ಮೂಲಕ ಪರರ ಸಂಪತ್ತು, ರಾಜ್ಯ, ಧನ ಅಥವಾ ಅಧಿಕಾರ ಅಪಹರಿಸುವುದು ಸ್ತೇಯವಾಗಿದೆ. ಶ್ರೀಮಂತರು ಸಂಗ್ರಹದಲ್ಲಿಯೇ ಸುಖವೆಂದರಿದವರು. ಬಡವರ ರಕ್ತ ಹೀರಿ ಧನ ಗಳಿಸುತ್ತಾರೆ. ಕಾರ್ಖಾನೆ ಮಾಲೀಕರು ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುವರು. ವ್ಯಾಪಾರಿಗಳು ಅನ್ನ ಮೊದಲಾದ ದಿನಸಿ ಸಾಮಗ್ರಿ ಸಂಗ್ರಹಿಸಿಟ್ಟು ಇಲ್ಲವೆಂದು ಹೇಳಿ ಅದಕ್ಕೆ ಉನ್ನತ ಬೆಲೆ ಬಂದಾಗ ಮಾರುವರು. ಕೆಲವರು ಕಲಬೆರಕೆ ಮಾಡುವರು. ಲಂಚ ತಿನ್ನುವರು. ಅನ್ಯಾಯವನ್ನು ನ್ಯಾಯವೆಂದು ಸಿದ್ಧಪಡಿಸುವುದು ಇವೆ ಮೊದಲಾದ ಸ್ತೇಯಗಳು ದೇಶದಿಂದ ನಾಶವಾದರೆ ರಾಮರಾಜ್ಯ ನಿರ್ಮಾಣವಾಗುವುದೇನಶ್ಚರ್ಯವಲ್ಲ. ಮದ್ಯಪಾನ ಮಾಡದವರು, ಪರಸ್ತ್ರೀ ನೋಡದವರು, ಹಿಂಸಾಚಾರಕ್ಕೆ ತಲೆಬಾಗದವರಿದ್ದ ಕಾಲವೇ ರಾಮರಾಜ್ಯ.

ಬಹುತೇಕ ಜನರು ಕಳ್ಳತನದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಪಂಚದ ಪ್ರತಿಯೊಂದು ಪದಾರ್ಥವೂ ಪರಮಾತ್ಮನದೇ. ಆತನೇ ಈ ಸೃಷ್ಟಿ ಮತ್ತು ಸೃಷ್ಟಿಯಲ್ಲಿಯ ಪದಾರ್ಥಗಳನ್ನು ನಿರ್ಮಿಸಿದ್ದಾನೆ. ಅವುಗಳೆಲ್ಲವೂ ಆವನಿಗೆ ಸೇರಿದವುಗಳು. ಅದರಲ್ಲಿ ನಮ್ಮದೆಂದು ಹೇಳುವುದು ವ್ಯರ್ಥಾಭಿಮಾನ. ಸರ್ವವೂ ಈಶ ಪ್ರದತ್ತವೇ ಆಗಿದೆ.

- ಶಿವಕುಮಾರ ಸ್ವಾಮೀಜಿ, ಸಿದ್ಧಾರೂಢ ಮಠ, ಬೀದರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.