ಮಂಗಳವಾರ, ಜೂನ್ 28, 2022
23 °C

ಬಸವಕಲ್ಯಾಣ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 84 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ವಿವಿಧ ಪ್ರೌಢಶಾಲೆಗಳ 7 ವಿದ್ಯಾರ್ಥಿಗಳು ಶೇ 99ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

‘ತಾಲ್ಲೂಕಿಗೆ ಒಟ್ಟು ಶೇ 84.08ರಷ್ಟು ಫಲಿ ತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 5,253 ವಿದ್ಯಾರ್ಥಿಗಳಲ್ಲಿ 4417 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಖಾಸಗಿ ಶಾಲೆಗಳ 7 ವಿದ್ಯಾರ್ಥಿಗಳು ಶೇ 99ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್ ತಿಳಿಸಿದ್ದಾರೆ.

ಬಸವೇಶ್ವರ ಪ್ರೌಢಶಾಲೆಯ ರಾಜ ಯುವರಾಜ 99.84, ಜ್ಞಾನಪ್ರಿಯಾ ಪ್ರೌಢಶಾಲೆಯ ಅಮನ್ ದತ್ತಾತ್ರೇಯ 99.84, ಬಸವೇಶ್ವರ ಪ್ರೌಢಶಾಲೆಯ ವೈಷ್ಣವಿ ಜ್ಞಾನೇಶ್ವರ ಪಾಟೀಲ 99.68, ಸಿದ್ಧಾಂತ ವಿಜಯಕುಮಾರ 99.52, ಶ್ವೇತಾ ಸಂತೋಷ 99.52, ಸುಷ್ಮಾ ವಿಠಲ್ 99.52, ಶರಣ ಬಸವೇಶ್ವರ ಪಬ್ಲಿಕ್ ಶಾಲೆಯ ಸ್ನೇಹಾ ಮಾಣಿಕ ರೆಡ್ಡಿ 99.52 ಅಂಕಗಳನ್ನು ಪಡೆದು ಉತ್ತೀ ರ್ಣ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಂದನೇ ತರಗತಿಯಿಂದ 10ನೇ ಯವರೆಗೆ ಉಚಿತ ಶಿಕ್ಷಣ ನೀಡುವ ತಾಲ್ಲೂಕಿನ ಗೋಕುಳದ ಸರಸ್ವತಿ ಪ್ರೌಢಶಾಲೆಗೆ 100ರಷ್ಟು ಫಲಿತಾಂಶ ಬಂದಿದೆ ಎಂದು ಸಂಸ್ಥೆ ಅಧ್ಯಕ್ಷ ದಿಲೀಪಗಿರಿ ಗೋಸಾಯಿ ಅವರು ತಿಳಿಸಿದ್ದಾರೆ.

ಒಟ್ಟು 19 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಸುಕನ್ಯಾ ಬಸವವರಾಜ 92, ಸಂಜೀವಿನಿ 92 ಮತ್ತು ವರ್ಷಾ 80ರಷ್ಟು ಅಂಕ ಪಡೆದಿದ್ದಾರೆ ಎಂದಿದ್ದಾರೆ.

ಮೊರಾರ್ಜಿ ಶಾಲೆಗೆ ಶೇ 100 ಫಲಿತಾಂಶ
ಜನವಾಡ:
ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಲಭಿಸಿದೆ.

ಶ್ರುತಿ ಶಿವರಾಜ ಶೇ 98.56, ಆರತಿ ಬಸವರಾಜ ಶೇ 98.4, ಸ್ವಾತಿ ವೆಂಕಟರೆಡ್ಡಿ ಶೇ 98.4, ಸ್ವರೂಪರಾಣಿ ಸೋಪಾನರಾವ್ ಶೇ 97.76, ಬಿಂದುರೆಡ್ಡಿ ಭೀಮರೆಡ್ಡಿ ಶೇ 97.6, ಎಂ.ಡಿ.ಸಮೀರ್ ರೆಹಮಾನ್‍ಸಾಬ್ ಶೇ 97.6, ನೇಹಾ ಉತ್ತಮ ಚೌಹಾಣ್ ಶೇ 97.44, ಉಷಾ ಸಿದ್ರಾಮ ಶೇ 97.44, ವೈಷ್ಣವಿ ಗಣಪತಿ ಶೇ 97.28, ಎಂ.ಡಿ.ಮುಸ್ತಾಫಾ ಶೇ 96.96, ಶ್ವೇತಾ ವೀರಭದ್ರ ಶೇ 96.48, ವೈಷ್ಣವಿ ಶಾಮರೆಡ್ಡಿ ಶೇ 96.32, ವೈಭವಿ ರಾಜಕುಮಾರ ಶೇ 95.84, ರಾಜಕುಮಾರ ಪಾಂಡುರಂಗ ಶೇ 95.86, ಶಿವಶರಣ ಝರಾರೆಡ್ಡಿ ಶೇ 95.6, ನಾಗರಾಜ ಸಂಜುಕುಮಾರ ಶೇ 95.52, ಶ್ರೀಶಾಂತ ರವಿಕಾಂತ ಶೇ 95.52 ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಚನ್ನಬಸವ ಹೇಡೆ ಅವರು
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.