ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಗುರುತಿಸುವ ಸಾಧಕರಾಗಿ’

Last Updated 30 ನವೆಂಬರ್ 2022, 13:24 IST
ಅಕ್ಷರ ಗಾತ್ರ

ಕಮಲನಗರ: ‘ವಿದ್ಯಾರ್ಥಿಗಳು ಸಮಾಜ ಗುರುತಿಸುವಂಥ ಸಾಧನೆ ಮಾಡಬೇಕು’ ಎಂದು ಪಿಯು ಕಾಲೇಜು ಪ್ರಾಂಶುಪಾಲ ಶಿವಾಜಿ.ಆರ್.ಎಚ್ ಸಲಹೆ ನೀಡಿದರು.

ಪಟ್ಟಣದ ಶಾಂತಿವರ್ಧಕ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಲಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಕಷ್ಟು ಪ್ರಯತ್ನಪಡುತ್ತಾರೆ. ಹೀಗಾಗಿ ಮಕ್ಕಳು ಪೋಷಕರ ಆಶಯ ಈಡೇರಿಕೆಗೆ ಶ್ರಮಿಸಬೇಕು ಎಂದರು.

ಆಡಳಿತಾಧಿಕಾರಿ ವಿವೇಕಾನಂದ ಜೋಶಿ ಮಾತನಾಡಿ,‘ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ಬಿಲಗುಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇಲ್ವಿಚಾರಕ ಪ್ರಕಾಶ ಮಾನಕರಿ, ವಿಶ್ವನಾಥ ಡೋಣಗಾಪುರೆ, ರಾಜಕುಮಾರ.ಎಂ,ರಾಂಪುರೆ, ಸತೀಶ ಮಟಕೆ, ರೇಖಾ ಕರಕರೆ, ವಿಜಯಲಕ್ಷ್ಮೀ ಕೋಟೆ, ಜ್ಞಾನೋಬಾ ಭೂರೆ, ದತ್ತು ಸೂರ್ಯವಂಶಿ, ಜಯಂತಿ ಮಂಗಳೂರೆ, ಚಂದ್ರಕಾಂತ ಭೈರಪ್ಪ ಹಾಗೂ ಮಕ್ಕಳು ಇದ್ದರು.

ಶಿಕ್ಷಕಿ ಸವಿತಾ ಬಿರಾದಾರ ನಿರೂಪಿಸಿದರು. ರಾಮೇಶ್ವರ ಬಿರಾದಾರ ಸ್ವಾಗತಿಸಿದರು. ರೇಖಾ ಕರಕರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT