ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ವಿದ್ಯಾರ್ಥಿ ಪರಿಷತ್‌ ಸಂಸ್ಥಾಪನಾ ದಿನಾಚರಣೆ

Published 9 ಜುಲೈ 2024, 16:13 IST
Last Updated 9 ಜುಲೈ 2024, 16:13 IST
ಅಕ್ಷರ ಗಾತ್ರ

ಬೀದರ್‌: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) 76ನೇ ಸಂಸ್ಥಾಪನಾ ದಿನ ನಗರದಲ್ಲಿ ಮಂಗಳವಾರ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ಮಾಡಿ ಸಸಿಗಳನ್ನು ನೆಡಲಾಯಿತು. ಎಬಿವಿಪಿ ನಗರ ಘಟಕದ ಅಧ್ಯಕ್ಷ ಅನಿಲ್ ಜಾಧವ್ ಮಾತನಾಡಿ, 1949ರ ಜುಲೈ 9ರಂದು ಸ್ಥಾಪನೆಯಾದ ವಿದ್ಯಾರ್ಥಿ ಸಂಘಟನೆ 76 ವರ್ಷಗಳ ಸುದೀರ್ಘ ದಾರಿ ಕ್ರಮಿಸಿದೆ. 'ವಿದ್ಯಾರ್ಥಿಶಕ್ತಿ - ರಾಷ್ಟ್ರಶಕ್ತಿ' ಎಂಬ ಸಂದೇಶದೊಂದಿಗೆ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಸಾಮಾನ್ಯ ವಿದ್ಯಾರ್ಥಿಯನ್ನು ಈ ದೇಶದ ಶಕ್ತಿಯಾಗಿ ಬದಲಿಸುವ ಮಹೋನ್ನತ ಕಾರ್ಯ ಮಾಡಿದೆ ಎಂದು ಹೇಳಿದರು.

ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡಬೇಕೆನ್ನುವುದು ಎಬಿವಿಪಿ ಅಚಲ ನಂಬಿಕೆ. ಯಾವ ಸಂಘಟನೆಗಳು ಆ ದೇಶದ ಮಣ್ಣಿಗೆ ಪೂರಕವಾಗಿ ಕೆಲಸ ಮಾಡುತ್ತವೆಯೋ ಆ ಸಂಘಟನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅದರಂತೆ ಎಬಿವಿಪಿ ಕೆಲಸ ಮಾಡುತ್ತಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದರು.

ಹತ್ತು ಸಾವಿರ ವಿದ್ಯಾರ್ಥಿಗಳೊಂದಿಗೆ ಕಾಶ್ಮೀರ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಜಮ್ಮು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತಿರಂಗಾ ಧ್ವಜ ಹಾರಿಸಿ ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಸಾರಿದ ಹಿರಿಮೆ ಪರಿಷತ್ತಿನದು ಎಂದು ಮುಖಂಡ ವೀರೇಶ್ ಸ್ವಾಮಿ ಹೇಳಿದರು.

ನಗರ ಘಟಕದ ಉಪಾಧ್ಯಕ್ಷ ಅಮಿತ್ ರೆಡ್ಡಿ, ನಗರ ಘಟಕದ ಕಾರ್ಯದರ್ಶಿ ಆನಂದ್ ಅಮನವಾದೆ, ನಗರ ಸಹ ಕಾರ್ಯದರ್ಶಿ ಪವನ್ ಕುಂಬಾರ್, ನಾಗರಾಜ್ ಸುಲ್ತಾನಪುರ, ಜಿಲ್ಲಾ ಸಂಚಾಲಕ ಶಶಿಕಾಂತ್ ರಾಕ್ಲೆ, ಕಾರ್ಯಾಲಯ ಕಾರ್ಯದರ್ಶಿ ಪವನ್ ಪಾಂಚಾಳ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಯಿ ಬೋಸ್ಲೆ, ಕಾಲೇಜು ವಿಭಾಗದ ಅಧ್ಯಕ್ಷ ಯಲ್ಲಾಲಿಂಗ, ಕಾರ್ಯದರ್ಶಿ ಮಮತಾ, ಅತೀಶ್, ವಿಶ್ವಾಸ್, ಅಂಬರೀಶ್ ಬಿರಾದಾರ,  ಲಕ್ಷ್ಮಿಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT