ಖಟಕಚಿಂಚೋಳಿ: ಗ್ರಾಮದ ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲಾ ಆವರಣದಲ್ಲಿದ್ದ ಎರಡು ಬೋರ್ವೆಲ್ಗಳೂ ಕೆಟ್ಟಿದ್ದರಿಂದ ಹದಿನೈದು ದಿನಗಳಿಂದ ಕುಡಿಯಲು, ಬಿಸಿಯೂಟದ ಅಡುಗೆ ಮಾಡಲು, ಶೌಚಾಲಯ ಬಳಕೆಗೆ ನೀರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಶಾಲೆಯಲ್ಲಿ ನೀರು ಇಲ್ಲದಿರುವುದರಿಂದ ನಾವೆಲ್ಲರೂ ಮನೆಯಿಂದ ನೀರು ತರುತ್ತಿದ್ದೇವೆ. ಶೌಚಾಲಯ
ದಲ್ಲಿ ಹನಿ ನೀರು ಇಲ್ಲದಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ಶೌಚಕ್ಕೆ ಹೊರಗಡೆಯೂ ಹೋಗುವಂತಿಲ್ಲ. ದುರ್ವಾಸನೆಯಲ್ಲಿಯೇ ಮೂಗು ಮುಚ್ಚಿಕೊಂಡು ಶೌಚಕ್ಕೆ ಹೋಗುವಂತಾಗಿದೆ’ ಎಂದು ಪ್ರೌಢಶಾಲೆ ವಿದ್ಯಾರ್ಥಿನಿಯರು ಅಳಲು ತೋಡಿಕೊಳ್ಳುತ್ತಾರೆ.

‘ಶಾಲೆಯಲ್ಲಿ ಬೋರ್ವೆಲ್ ಕೆಟ್ಟು ಹೋಗಿ ಬಹಳ ದಿನಗಳಾಗಿವೆ. ಆದರೂ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ಇದರಿಂದ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣವೇ ದುರಸ್ತಿಗೊಳಿಸಬೇಕು’ ಎಂದು ಪಾಲಕರು ಒತ್ತಾಯಿಸಿದ್ದಾರೆ.

‘ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಹಾಜರಾತಿಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಕ್ಷೇತ್ರ ಶಿಕ್ಷಣಾಧಿಕಾರಿ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರೇವಣಸಿದ್ಧ ಜಾಡರ್ ಆಗ್ರಹಿಸಿದ್ದಾರೆ.

ಶಾಲೆಯಲ್ಲಿನ ನೀರಿನ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರವಾಣಿ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಸುತ್ತಮುತ್ತಲಿನ ಮನೆಗಳಿಗೆ ತೆರಳುತ್ತೇವೆ’

‘ಶಾಲೆಯಲ್ಲಿ ಕುಡಿಯಲು ನೀರಿಲ್ಲ. ನಾವೆಲ್ಲರೂ ಮಧ್ಯಾಹ್ನ ಊಟದ ನಂತರ ಶಾಲೆಯ ಸುತ್ತ ಮುತ್ತಲಿನ ಮನೆಗಳಿಗೆ ತೆರಳಿ ನೀರು ಕುಡಿಯುತ್ತಿದ್ದೇವೆ’ ಎಂದು ವಿದ್ಯಾರ್ಥಿ ಮಹಾಲಿಂಗ ಹೇಳಿದರು.

‘ಶಾಲೆಯಲ್ಲಿ ಬೋರವೆಲ್ ಕೆಟ್ಟಿರುವ ಬಗ್ಗೆ ಪಂಚಾಯಿತಿಯವರ ಗಮನಕ್ಕೆ ತರಲಾಗಿದೆ. ಆದರೆ, ಬೋರ್ವೆಲ್ ಭೂಮಿಯ ಆಳದಲ್ಲಿ ಸಿಲುಕಿರುವುದರಿಂದ ಹೊರಬರುತ್ತಿಲ್ಲ. ಒಂದೆರಡು ದಿನಗಳಲ್ಲಿ ದುರಸ್ತಿಗೊಳಿಸಲಾಗುವುದು’ ಎಂದು ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜಕುಮಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಾಲಾ ಆವರಣದಲ್ಲಿ ಹೊಸ ಬೋರ್ವೆಲ್ ಕೊರೆಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಬೇಕು
ರೇವಣಸಿದ್ಧ ಜಾಡರ್ಸಾ ಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.