ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಸಾವಿರ ಹೊಸ ಜನೌಷಧಿ ಕೇಂದ್ರ ಸ್ಥಾಪನೆ: ಭಗವಂತ ಖೂಬಾ

Published 26 ಜುಲೈ 2023, 16:29 IST
Last Updated 26 ಜುಲೈ 2023, 16:29 IST
ಅಕ್ಷರ ಗಾತ್ರ

ಬೀದರ್‌: ‘ದೇಶದಾದ್ಯಂತ 9,512 ಜನೌಷಧಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಬರುವ ಮಾರ್ಚ್‌ನೊಳಗೆ ಇನ್ನೂ ಹತ್ತು ಸಾವಿರ ಕೇಂದ್ರಗಳನ್ನು ಆರಂಭಿಸಲಾಗುವುದು’  ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,  ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಗಳು ದೊರೆಯುತ್ತಿದ್ದು, ಹೆಚ್ಚಿನ ಜನ ಜನೌಷಧಿಗಳತ್ತ ಒಲವು ತೋರುತ್ತಿದ್ದಾರೆ. ಸ್ವಯಂ ಉದ್ಯೋಗ ಕೈಗೊಳ್ಳುವವರು ಕೇಂದ್ರ ಆರಂಭಿಸಲು ಆಸಕ್ತಿ ತೋರಿಸುತ್ತಿದ್ದಾರೆ’ ಜುಲೈ 17ರ ವರೆಗೆ 915 ಔಷಧಿಗಳಿಗೆ ಸೀಲಿಂಗ್ ಬೆಲೆ ಸರ್ಕಾರ ನಿಗದಿಪಡಿಸಿದೆ. ಈ ಪೈಕಿ 691 ಔಷಧಿಗಳನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ ಅಡಿಯಲ್ಲಿ ಮತ್ತು 224 ಔಷಧಿಗಳನ್ನು ಎನ್‌ಎಲ್‌ಇಎಂ ಅಡಿಯಲ್ಲಿ ನಿಗದಿಪಡಿಸಲಾಗಿದೆ ಎಂದರು.

ಔಷಧಗಳ ಬೆಲೆ ನಿಯಂತ್ರಣ ಆದೇಶದ ಪ್ರಕಾರ, ಜುಲೈ 7ರ ವರೆಗೆ ಸುಮಾರು 2,450 ಹೊಸ ಔಷಧಿಗಳ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿಗೆ (ಪಿಎಂಬಿಜೆಕೆ) ಸಂಬಂಧಿಸಿದಂತೆ, ದೇಶದಾದ್ಯಂತ ಈಗ 9,512 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಮೆಡಿಕಲ್‌ಗಳಲ್ಲಿ ರೇಬಿಸ್‌ ಡಿ.ಎಸ್.ಆರ್. 1 ಸ್ಟ್ರಿಪ್‌ ಗುಳಿಗೆಗೆ ₹180 ಇದ್ದರೆ, ಜನೌಷಧಿಯಲ್ಲಿ ₹22ಕ್ಕೆ ಸಿಗುತ್ತದೆ. ಹೀಗೆ ಅನೇಕ ಗುಳಿಗೆಗಳು ಕಡಿಮೆ ಬೆಲೆಗೆ ಸಿಗುತ್ತವೆ. ಇದುವರೆಗೆ ಔಷಧಿಗಳಿಂದ ಒಟ್ಟು ₹19,352 ಕೋಟಿ ಉಳಿತಾಯವಾಗಿದೆ. ಬಡವರಿಗಾಗಿ ಜನೌಷಧಿ ಕೇಂದ್ರಗಳು ಪ್ರಾರಂಭಿಸಲಾಗಿದ್ದು, ಜನ ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT