ಹುಮನಾಬಾದ್: ತಾಲ್ಲೂಕಿನ ಮಾಣಿಕ್ ನಗರದ ಮಾಣಿಕ ಪ್ರಭು ದೇವಸ್ಥಾನದ 207ನೇ ಜಾತ್ರಾ ಮಹೋತ್ಸವವು ಡಿಸೆಂಬರ್ 10ರಿಂದ 16ರವರೆಗೆ ಅದ್ದೂರಿಯಾಗಿ ಜರುಗಲಿದೆ.

ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ತೀರ್ಥಸ್ನಾನ , ಯೋಗದಂಡ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಮಾಣಿಕ್ ಪ್ರಭು ಸಂಸ್ಥಾನದ ಪೀಠಾಧಿಪತಿ ಜ್ಞಾನರಾಜ್ ಮಾಣಿಕಪ್ರಭು ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.

10ರಂದು ಸಕಲ ದೇವತಾ ನಿಮಂತ್ರಣ, 11ರಂದು ಮಾಣಿಕ್ ಪ್ರಭುಗಳ 159ನೇ ಪುಣ್ಯತಿಥಿ, 12 ರಂದು ಸಂಗಮ್ ಸ್ನಾನ , ಪ್ರಭು ದ್ವಾದಶಿ, 13 ರಂದು ದಕ್ಷಿಣ ದರ್ಬಾರ್, 14ರಂದು ಗುರು ಪೂಜೆ, 15ರಂದು ಮಾಣಿಕ್ ಪ್ರಭುಗಳ 207ನೇ ಜಾತ್ರಾ ಮಹೋತ್ಸವ ಹಾಗೂ ದತ್ತ ಜಯಂತಿ ಕಾರ್ಯಕ್ರಮ, 16ರಂದು ಸಂಗೀತ ಕಾರ್ಯಕ್ರಮದ ಮೂಲಕ ಸಮಾರೋಪ ಆಗಲಿದೆ.

ಈ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ , ತೆಲಂಗಾಣ , ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಭಕ್ತರು ಸಂಸ್ಥಾನಕ್ಕೆ ಬಂದು ಪ್ರಭುಗಳ ದರ್ಶನ ಪಡೆದುಕೊಳ್ಳುತ್ತಾರೆ.

ಮಾಣಿಕ ಪ್ರಭುಗಳ ಹಿನ್ನೆಲೆ:

ಮಾಣಿಕಪ್ರಭುಗಳ ಪೂರ್ವಜರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಗ್ರಾಮದವರು. ಮನೋಹರ ಮತ್ತು ಬಯಮ್ಮ ದಂಪತಿಯ ಎರಡನೇ ಪುತ್ರರಾಗಿ ಜನಿಸಿದರು. ಅವರು ಜನಿಸಿದಾಗ ಗ್ರಾಮಸ್ಥರು ದತ್ತ ಜಯಂತಿ ಆಚರಿಸುತ್ತಿದ್ದರು ಪ್ರಕೃತಿಯ ಸುಂದರ ಪರಿಸರದಲ್ಲಿ ಜನಿಸಿದ ಈ ಮಗುವಿಗೆ ಅಜ್ಜಿ ಬಚ್ಚಮ್ಮ ‘ಮಾಣಿಕ್’ ಎಂದು ಹೆಸರಿಟ್ಟರು. ಎಲ್ಲರೂ ಈ ಮಗುವನ್ನು ‘ರತ್ನ’ ಎಂದು ಕರೆಯುತ್ತಿದ್ದರು. ಜಯಮ್ಮ ಅವರ ಪತಿ ಹಾಗೂ ಅತ್ತೆ ನಿಧನರಾದ ನಂತರ ಅವರ ತವರು ಮನೆಯಾದ ಬಸವಕಲ್ಯಾಣಕ್ಕೆ ಬಂದರು. ಮಕ್ಕಳ ಪೋಷಣೆಯನ್ನು ಅವರ ಸೋದರ ಬಳವಂತರಾಯ ಅಪ್ಪಾರಾವ ಕುಲ್ಕರ್ಣಿ ವಹಿಸಿಕೊಂಡರು.

ವಿದ್ಯಾಭ್ಯಾಸ: ಬಸವಕಲ್ಯಾಣದ ಬಳವಂತರಾಯ ಕುಲ್ಕರ್ಣಿ ನವಾಬನ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಳಿಯ ಮಾಣಿಕ ಪ್ರಭು ವಿದ್ಯಾಭ್ಯಾಸಕ್ಕೆ ಎಂದು ಶಾಲೆಗೆ ಕಳಿಸಿಕೊಟ್ಟರು. ಆದರೆ, ಅವರು ಶಾಲೆಯ ಕಟ್ಟೆ ಹತ್ತಲಿಲ್ಲ. ಸ್ವಯಂ ಜ್ಞಾನಿಗಳಾಗಿದ್ದರು ಸದಾ ಧ್ಯಾನ ಯೋಗದಲ್ಲಿ ತಲ್ಲೀನರಾಗಿ ಏಕಾಂತವಾಸ ಅನುಭವಿಸುತ್ತಿದ್ದರು.

ಪ್ರಭುಗಳು ವೈದಿಕವಿದ್ಯೆ, ಶಬ್ದ ರೂಪಾಲಿ, ಅಮರಕೋಶ, ವ್ಯಾಕರಣ ಕಲಿತರು, ರಾಜ್ಯಭಾಷಾ, ದರಬಾರಿ, ಫಾರಸಿ, ಉರ್ದು, ಮರಾಠಿ, ಹಿಂದಿ, ತೆಲುಗು, ಅರಬಿ, ಬ್ರಿಟಿಷ್ ಭಾಷೆಗಳನ್ನು ಕಲಿತಿದ್ದರು. ಮಾಣಿಕ ಪ್ರಭುಗಳು ತಪಸ್ಸು, ಯೋಗ ಸಾಧನೆಯನ್ನು ಪಡೆದುಕೊಂಡಿದ್ದರು.

ಪ್ರವಾಸಿಗರ ಆಕರ್ಷಣೆ: ಹುಮನಾಬಾದ್ದಿಂದ ತಾಲ್ಲೂಕಿನ ಮಾಣಿಕ್ ನಗರ ಗ್ರಾಮಕ್ಕೆ ತೆರಳುತ್ತಿರುವ ಮಾರ್ಗದ ರಸ್ತೆಯ ಎರಡು ಬದಿಯಲ್ಲಿ ಎತ್ತರವಾಗಿ ಬೆಳೆದು ನಿಂತಿರುವ ಮರಗಳು. ಮೂರು ಕಾಲಕ್ಕು ತಂಪು ವಾತಾವರಣ ನೀಡುವ ಈ ಮರಗಳು ಹಚ್ಚ ಹಸಿರಿನಿಂದಕೊಡಿದ್ದು, ನೋಡುಗರರನ್ನು ಕಣ್ಮನ ಸೆಳೆಯುವಂತೆ ಇವೆ.

ಸಂಗೀತ ದರ್ಬಾರ್: ಮಾಣಿಕ್ ಪ್ರಭುಗಳು, ಜ್ಞಾನರಾಜ ಮಹಾರಾಜ ಪ್ರಭುಗಳು ಸಂಗೀತ ಪ್ರೇಮಿಗಳಾಗಿದ್ದರಿಂದ ಇಲ್ಲಿ ಭಕ್ತಿ ಸಂಗೀತ, ಸುಗಮ ಸಂಗೀತ ಹಿಂದುಸ್ಥಾನಿ ಸಂಗೀತ ಸೇರಿದಂತೆ ನಾನಾ ರೀತಿಯ ಸಂಗೀತ ಕಲಾವಿದರು ಇಲ್ಲಿ ಸಂಗೀತದ ರಸದೌತಣ ಉಣಬಡಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಮಲ್ಲಿಕಾರ್ಜುನ ಮನ್ಸೂರ್, ಲತಾ ಮಂಗೇಶ್ವರ, ಭೀಮಸೇನ ಜೋಷಿ, ಉಸ್ತಾದ ಜಾಕೀರ್ ಹುಸೇನ ಸಂಗೀತಾ ಕಟ್ಟಿ ಸೇರಿದಂತೆ ಮಹಾನ್ ಕಲಾವಿದರು ಇಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಇಲ್ಲಿ ರಾತ್ರಿ ಇಡೀ ನಡೆಯುವ ಸಂಗೀತ ದಾರ್ಬಾರ್ನಲ್ಲಿ ಸಂಗೀತ ಆಸಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.