ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಂಘಟನೆಯಿಂದ ತಿರಂಗಾ ಜಾಥಾ

Last Updated 16 ಆಗಸ್ಟ್ 2022, 15:15 IST
ಅಕ್ಷರ ಗಾತ್ರ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಲ್ಯಾಣ ಕುಟುಂಬ ಮಹಿಳಾ ಸಂಘಟನೆಯ ಸದಸ್ಯೆಯರು ನೌಬಾದ್‍ನ ಕಲ್ಯಾಣನಗರದಲ್ಲಿ ತಿರಂಗಾ ಜಾಥಾ ನಡೆಸಿದರು.

ಕೈಯಲ್ಲಿ ತಿರಂಗಾ ಹಿಡಿದುಕೊಂಡು ಘೋಷಣೆ ಕೂಗುತ್ತ ಬಡಾವಣೆಯಲ್ಲಿ ಜಾಥಾ ನಡೆಸಿ ದೇಶಾಭಿಮಾನ ಮೆರೆದರು.
ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಮಂಗಲಾ ಚಿದ್ರಿ ಮಾತನಾಡಿದರು.

ಜ್ಯೋತಿ ಬಾವಗೆ, ವಿಜಯಲಕ್ಷ್ಮಿ ರಟಕಲೆ, ಚಿನ್ನಮ್ಮ ಬಿರಾದಾರ, ಪೂಜಾ ದೇಶಪಾಂಡೆ, ಶಿವಲೀಲಾ ಕಲ್ಲೂರ, ಮಹಾದೇವಿ ಕೋರೆ, ಉರ್ಮಿಳಾ ಸಿಂಧೆ, ಸುಜಾತಾ ಪಾಂಚಾಳ, ಜಗದೇವಿ ಚನಶೆಟ್ಟಿ, ಸವಿತಾ ಕಂದಗೂಳೆ, ಮೀನಾಕ್ಷಿ ಉದಗಿರೆ, ಶಿವನಂದಾ ಜೈನಾಪುರೆ, ವಿಜಯಲಕ್ಷ್ಮಿ ರೆಡ್ಡಿ, ಶಶಿಕಲಾ ಪಟವಾರಿ, ರಮೇಶ ಚಿದ್ರಿ, ವೀರಶೆಟ್ಟಿ ಚನಶೆಟ್ಟಿ, ವೈಜಿನಾಥ ಬಾವಗಿ ಪಾಲ್ಗೊಂಡಿದ್ದರು.

ಮೊಳಗಿದ ಭಾರತ ಮಾತೆ ಜೈಕಾರ:

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಇಲ್ಲಿಯ ನೌಬಾದ್‍ನಲ್ಲಿ ಹರ್ ಘರ್ ತಿರಂಗಾ ಯಾತ್ರೆ ನಡೆಯಿತು. ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆಯ ಉದ್ದಕ್ಕೂ ಬೋಲೋ ಭಾರತ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಉಚಿತವಾಗಿ ವಿತರಿಸಲಾಯಿತು.

ಇದಕ್ಕೂ ಮುನ್ನ ಯಾತ್ರೆಗೆ ಚಾಲನೆ ನೀಡಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ರಾಜಶೇಖರ ಶಿವಾಚಾರ್ಯರು, ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿಯೇ ನಾವು ಇಂದು ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ ಎಂದು ನುಡಿದರು.

ನಗರಸಭೆ ಸದಸ್ಯೆ ಮಹಾದೇವಿ ಬಸವರಾಜ ಹುಮನಾಬಾದೆ, ಯುವ ಮುಖಂಡ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಸಂಗಮೇಶ ಹುಮನಾಬಾದೆ, ಬಸವರಾಜ ಹುಮನಾಬಾದೆ, ಕಂಟೆಪ್ಪ ಭಂಗೂರೆ, ವೀರೇಶ ಹುಮನಾಬಾದೆ, ಜಗದೀಶ ಕುಂಬಾರ, ಬಸವರಾಜ ಭಂಗೂರೆ, ಲೋಕೇಶ ಭಂಗೂರೆ, ಸಾಗರ ಚಾವಳೆ, ಮಹೇಶ ಪಾಟೀಲ, ಅವಿನಾಶ ಮೂಲಗೆ, ವಿಶಾಲ ಅತಿವಾಳೆ ಮತ್ತಿತರರು ಪಾಲ್ಗೊಂಡಿದ್ದರು.

ಜೈಹಿಂದ್ ಹಿರಿಯ ನಾಗರಿಕರ ಸಂಸ್ಥೆ:

ನಗರದ ಜೈಹಿಂದ್ ಹಿರಿಯ ನಾಗರಿಕರ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಉದ್ಯಮಿ ರಾಮಕೃಷ್ಣ ಮುನಿಗ್ಯಾಲ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕೋಶಾದ್ಯಕ್ಛ ಗಂಗಪ್ಪ ಸಾವಳೆ, ವೀರಭದ್ರಪ್ಪ ಉಪ್ಪಿನ್,

ಪ್ರೊ. ದೆವೇಂದ್ರ ಕಮಲ್, ಲಲಿತಾ ಮುನಿಗ್ಯಾಲ್, ರಾಜೇಂದ್ರಸಿಂಗ್ ಪವಾರ್, ಸುಭಾಷ್ ಪೋಲಾ, ದತ್ತಾತ್ರೇಯ ಕು, ಶಂಕರ ಚಿದ್ರಿ, ಸಂಗಶೆಟ್ಟಿ ಜಗದೇವ, ಸೋಮೇಶ, ಬಸವರಾಜ ಘಾಳೆ, ವಿಜಯಕುಮಾರ ಅತನೂರ್, ರಾಮಚಂದ್ರ ಗಜರೆ, ವಿಜಯಕುಮಾರ್ ಸೂರ್ಯಾನ, ಎಸ್. ವಿ. ಕಲ್ಮಠ, ಮಹಾಲಿಂಗಪ್ಪ ಬೆಲ್ದಾಳೆ, ಚಂದ್ರಕಾಂತ ಮೋದಿ, ಅರವಿಂದ ಕುಲಕರ್ಣಿ, ಸಂತೋಷ ಸಿಂಧೆ, ಸೂರ್ಯಕಾಂತ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT