ಭಾಲ್ಕಿ: ತಾಲ್ಲೂಕಿನ ಇಂಚೂರ ಗ್ರಾಮದ ಕಾರಂಜಾ ನದಿ ದಂಡೆಯ ಬಳಿಯಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್ ಕಾಮಗಾರಿಯನ್ನು ಭಾನುವಾರ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ‘ಟ್ರೀ ಪಾರ್ಕ್ ನಿರ್ಮಾಣದಿಂದಾಗಿ ಸ್ಥಳೀಯವಾಗಿ ಹಸಿರು ಆವರಣ ಹೆಚ್ಚಳವಾಗುವುದು. ಜೈವಿಕ ವೈವಿಧ್ಯತೆ ಬೆಳೆದು ಬರುವುದು. ಹಕ್ಕಿಗಳು ಮತ್ತು ಚಿಟ್ಟೆಗಳಿಗೆ ಉತ್ತಮ ವಾಸಸ್ಥಳ ಸಿಗುವುದು ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಈ ಪ್ರದೇಶದ ಸೌಂದರ್ಯ ಮೌಲ್ಯವೂ ಹೆಚ್ಚಿಳವಾಗುವುದು. ವೀಕ್ಷಕರಿಗಾಗಿ ಬಟರ್ಫ್ಲೈ ಗಾರ್ಡನ್, ಕ್ಯಾಕ್ಟಸ್ ತೋಟ, ವಾಟರ್ಫ್ರಂಟ್ ಸ್ಟೆಪ್ಸ್, ಪ್ಲೇ ಏರಿಯಾ, ಪರ್ಗೊಲಾ, ಹ್ಯಾಂಗಿಂಗ್ ಬ್ರಿಡ್ಜ್ ಮುಂತಾದ ಸೌಲಭ್ಯಗಳು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

ಅರಣ್ಯ ಉಪಸಂರಕ್ಷಣ ಅಧಿಕಾರಿ ವಾನತಿ ಮೂರುಗೇಸನ್ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.