ಬಸವಕಲ್ಯಾಣ: ‘ದೊಡ್ಡ ಮಠಾಧೀಶರು ಸಹ ತಮ್ಮದೇ ತುಲಾಭಾರ ಆಗಬೇಕು ಎಂದು ಹಠ ಹಿಡಿಯುವ ಇಂಥ ಕಾಲದಲ್ಲಿ ಅನ್ಯರ ತುಲಾಭಾರ ನಡೆಸಿ ದೇವಸ್ಥಾನದ ಶರಣೆ ಭಾಗ್ಯವಂತಿ ತಾಯಿಯವರು ದೊಡ್ಡ ಗುಣ ತೋರಿಸಿ ತಮ್ಮ ಭಾರ ಹೆಚ್ಚಿಸಿಕೊಂಡಿದ್ದಾರೆ’ ಎಂದು ಹಾವೇರಿ ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಸ್ವಾಮೀಜಿ ಹೇಳಿದ್ದಾರೆ.

ತಾಲ್ಲೂಕಿನ ಕೌಡಿಯಾಳದ ಭಾಗ್ಯವಂತಿ ದೇವಸ್ಥಾನದಲ್ಲಿ ಬುಧವಾರ ನಡೆದ ಮೂರು ದಿನಗಳ 22 ನೇ ಜಾತ್ರೆಯ ಸಮಾರೋಪ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರ್ಮಿಕ ಮುಖಂಡರು ಸ್ವಾವಲಂಬಿ, ಸ್ವಾಭಿಮಾನಿ ಆಗಿದ್ದರೆ ಮಾತ್ರ ಇಂಥ ದೊಡ್ಡ ದೇವಸ್ಥಾನಗಳು ಎದ್ದು ನಿಲ್ಲುತ್ತವೆ. ಶರಣೆ ಭಾಗ್ಯವಂತಿ ತಾಯಿಯವರು ತಮ್ಮ ಶುಭಾಶೀರ್ವಾದದ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ಹೀಗಾಗಿ ಭಕ್ತರ ಬದುಕಿನಲ್ಲಿನ ಸುಖ, ಶಾಂತಿ ಹೆಚ್ಚುತ್ತದೆ' ಎಂದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, `ಗ್ರಾಮಸ್ಥರಲ್ಲಿ ಒಗ್ಗಟ್ಟಿದೆ. ಅಲ್ಲದೆ ಇಲ್ಲಿ ದೈವಭಕ್ತರು ಅಧಿಕವಿರುವ ಕಾರಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆಯಿಂದ ನೆರವೆರುತ್ತವೆ' ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ ಮಾತನಾಡಿದರು. ಸಸ್ತಾಪುರ ಮಹಾದೇವಿ ತಾಯಿ ಅವರ ತುಲಾಭಾರ ನಡೆಯಿತು. ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ರತ್ನಾಕಾಂತ ಸ್ವಾಮೀಜಿ, ವಾಲ್ಮೀಕಿ ರಾಮ ಮಹಾರಾಜ, ಮುಖಂಡರಾದ ಮಿಲಿಂದ್ ಕುಲಕರ್ಣಿ, ನಾಗಪ್ಪ ಚಾಮಾಲೆ, ಚನ್ನವೀರ ಜಮಾದಾರ, ತುಕಾರಾಮ ರೊಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ ಕಲಶಗಳನ್ನು ಹೊತ್ತಿದ್ದರು.