ಗುರುವಾರ , ಮೇ 19, 2022
21 °C

ಎರಡು ವೆಂಟಿಲೇಟರ್ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬ್ರಿಮ್ಸ್ ಭೋದಕ ಆಸ್ಪತ್ರೆ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ 15 ಲಕ್ಷ ರೂಪಾಯಿ ಬೆಲೆಯ ಎರಡು ವೆಂಟಿಲೇಟರ್ ಕಳ್ಳತನ ಮಾಡಲಾಗಿದೆ.
ನಾಲ್ಕು ದಿನಗಳ ಹಿಂದೆ ಆಸ್ಪತ್ರೆಯ ಕೊಠಡಿಯಲ್ಲಿ ಗಣ್ಯರೊಬ್ಬರ ಪತ್ನಿಗೆ ವೆಂಟಿಲೇಟರ್ ಅಳವಡಿಸಲು ಇಡಲಾಗಿತ್ತು. ಅವರು ಖಾಸಗಿ ಆಸ್ಪತ್ರೆಗೆ ದಾಖಲಾದ ಕಾರಣ ಕೋವಿಡ್ ಆಸ್ಪತ್ರೆ ಗೆ ಬಂದಿರಲಿಲ್ಲ.
ಮಂಗಳವಾರ ಆಸ್ಪತ್ರೆಯ ಸಿಬ್ಬಂದಿ ಕೊಠಡಿಯೊಳಗೆ ಹೋದಾಗ ಕಿಟಕಿಯ ಗಾಜು ಒಡೆದು ಒಳಗೆ ಬಂದು ವೆಂಟಿಲೇಟರ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಹಿಂಬದಿಯ ಬಾಗಿಲ ಸಮೀಪ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳರು ಅದನ್ನು ಹಾಳು ಮಾಡಿದ್ದಾರೆ.
ಬ್ರಿಮ್ಸ್ ಆಧಿಕಾರಿಗಳು ನ್ಯೂ ಟೌನ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಆಸ್ಪತ್ರೆ ಸಿಬ್ಬಂದಿ ಹಾಗೂ ಡಿ ದರ್ಜೆ ನೌಕರರ ವಿಚಾರಣೆ ನಡೆಸಿದ್ದಾರೆ.

ಆಸ್ಪತ್ರೆ ಹಿಂಬದಿ ಬಂದು ಕಳ್ಳರು ದೊಡ್ಡ ಕಿಟಕಿ ಗಾಜು ಒಡೆದು ವೆಂಟಿಲೇಟರ್ ಕಳ್ಳತನ ಮಾಡಿದ್ದಾರೆ. ತಾಂತ್ರಿಕ ಸಿಬ್ಬಂದಿ ಹಾಗೂ ನರ್ಸಿಂಗ್ ಸಿಬ್ಬಂದಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬ್ರಿಮ್ಸ್ ಆಸ್ಪತ್ರೆ ವೈದಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು