ಬೀದರ್: ‘ಹೊಟ್ಟೆಗೆ ಹೊನ್ನಲ್ಲ, ಅನ್ನ ಬೇಕು ಎಂಬ ಮಾತು ಹೇಳಿ ಅದರ ಮಹತ್ವ ಸಾರಿದವರು ಒಕ್ಕಲಿಗ ಮುದ್ದಣ್ಣನವರು’ ಎಂದು ಬಸವಕಲ್ಯಾಣದ ನೀಲಾಂಬಿಕಾ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಸವಿತಾ ಯರನಳ್ಳೆ ತಿಳಿಸಿದರು.

ಲಿಂಗಾಯತ ಮಹಾ ಮಠದ ವತಿಯಿಂದ 270ನೇ ಮಾಸಿಕ ಶರಣ ಸಂಗಮ ಹಾಗೂ ರೈತ ದಿನಾಚರಣೆ ನಿಮಿತ್ತ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣನವರ ವಚನ ಚಿಂತನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹೊನ್ನಿನಿಂದ ಹೊಟ್ಟೆ ತುಂಬದು. ಹೊಟ್ಟೆ ತುಂಬಲು ಅನ್ನವೇ ಬೇಕು. ಕಾರಣ, ಚಿನ್ನಕ್ಕಿಂತ ಅನ್ನ ಮಿಗಿಲು. ದೇಹದ ಹಸಿವು ತಣಿಸಲು ಒಕ್ಕಲುತನ ಹಾಗೂ ಅಂತರಂಗದ ಹಸಿವು ತಣಿಸಲು ಆಧ್ಯಾತ್ಮ ಸಾಧನೆ ಅವಶ್ಯವೆಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಕೆ.ಎಸ್.ಸಿ.ಎ. ರಾಯಚೂರು ವಲಯ ಸಂಚಾಲಕ ಕುಶಾಲರಾವ್ ಪಾಟೀಲ ಗಾದಗಿ ಮಾತನಾಡಿ, ಮನುಷ್ಯನಿಗೆ ಮಣ್ಣಿನ ಸಂಬಂಧವಿರಬೇಕು. ಇಂದಿನ ಕಲುಷಿತ ವಾತಾವರಣದಲ್ಲಿ ಸ್ವತಃ ರೈತನಾದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಭೌತಿಕ ಕೃಷಿ ಮತ್ತು ಆಧ್ಯಾತ್ಮಿಕ ಕೃಷಿ ಎಂಬ ಎರಡು ಬಗೆಯ ಕೃಷಿಗಳನ್ನು ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ. ಇದರಲ್ಲಿ ಕೃಷಿಯೇ ಸರ್ವ ಶ್ರೇಷ್ಠ ಕಾಯಕ ಎಂದು ನುಡಿದರು.

ಕುಶಾಲರಾವ್ ಪಾಟೀಲ ಗಾದಗಿ ಹಾಗೂ ಗೋರ್ಟಾ(ಬಿ) ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷೆ ವಿಜಯಲಕ್ಷ್ಮಿ ಭೀಮಣ್ಣ ರಾಜೋಳೆ ಅವರನ್ನು ಸನ್ಮಾನಿಸಲಾಯಿತು. ಬೀದರ್ನ ನೀಲಮ್ಮನ ಬಳಗದ ಶ್ರೀದೇವಿ (ಸಿದ್ದಮ್ಮ) ಶರಣಬಸವ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಪರುಷಕಟ್ಟೆ ಚನ್ನಬಸವಣ್ಣ, ಸಾಹಿತಿ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಪ್ರಕಾಶ್ ಮಠಪತಿ, ಚನ್ನಬಸಪ್ಪ ಹಂಗರಗಿ ಮತ್ತಿತರರು ಇದ್ದರು.

ಸೌಮ್ಯ ಮಹೇಶ ಶೇರಿಕಾರ್, ಪ್ರತ್ಯಷ್ ಮತ್ತು ಪ್ರಿಯಾಂಶ್ ಗುರುಪೂಜೆ ನೆರವೇರಿಸಿದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆ, ಗುರುಶ್ರೀ, ಶ್ಯಾಮಲಾ ಎಲಿ ವಚನ ಗಾಯನ ನಡೆಸಿಕೊಟ್ಟರು. ಬಸವ ಚಿಕ್ಕಲಿಂಗೆ ಸ್ವಾಗತಿಸಿದರು. ಸುನಂದಾ ಬಸವರಾಜ ಶೇರಿಕಾರ್ ಭಕ್ತಿ ದಾಸೋಹಗೈದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.