ಬುಧವಾರ, ಮೇ 18, 2022
21 °C
ಈ ಬಾರಿ ಸರಳ ಆಚರಣೆ: ಅಕ್ಕ ಅನ್ನಪೂರ್ಣ

25ರಿಂದ ವಚನ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವ ಫೆಬ್ರುವರಿ 25, 26 ಹಾಗೂ 27 ರಂದು ನಡೆಯಲಿದೆ.

ಈ ವರ್ಷದ ವಚನ ವಿಜಯೋತ್ಸವವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ. ನಗರದ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣ ಹಾಗೂ ಗಂಗಾಂಬಿಕೆ ಅಕ್ಕ ಅವರ ನೇತೃತ್ವದಲ್ಲಿ ನಡೆಯಲಿದ್ದು, ಮೆರವಣಿಗೆಯನ್ನು ರದ್ದುಪಡಿಸಲಾಗಿದೆ.

ಶರಣರು ತಮ್ಮ-ತಮ್ಮ ಮನೆಗಳಲ್ಲೇ ಇಷ್ಟಲಿಂಗ ಯೋಗ, ಸಮಗ್ರ ಗುರುವಚನ ಪಾರಾಯಣ, ಧರ್ಮಗ್ರಂಥಕ್ಕೆ ಗೌರವಾರ್ಪಣೆ ಮಾಡಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.