ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಲ್ಲಿ ಮೌಲ್ಯ ಬಿತ್ತಿ: ಅರವಿಂದಕುಮಾರ ಅರಳಿ

Last Updated 13 ಜುಲೈ 2021, 14:39 IST
ಅಕ್ಷರ ಗಾತ್ರ

ಬೀದರ್: ‘ಶಿಕ್ಷಕರು ಶಾಲಾ ಕಾಲೇಜುಗಳ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರ್ಥ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕರಲ್ಲಿ ವೃತ್ತಿಪರ ಮೌಲ್ಯ ಹಾಗೂ ಬೋಧನಾ ಕೌಶಲ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಸ್ತು, ಕಠಿಣ ಪರಿಶ್ರಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಕಾರ್ಯಗಳು ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತವೆ’ ಎಂದು ಹೇಳಿದರು.

‘ಇಂದಿನ ಮಕ್ಕಳೇ ಮುಂದಿನ ನಾಯಕರು. ಮೌಲ್ಯಯುತ ಶಿಕ್ಷಣ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ಸುಂದರ ಸಮಾಜ ಹಾಗೂ ದೇಶವನ್ನು ಕಟ್ಟಬಲ್ಲರು. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಆದರ್ಶವಾಗಿರಬೇಕು’ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್. ಪ್ರಭು ಮಾತನಾಡಿ, ‘ಸಮಯ ಪರಿಪಾಲನೆಯ ಮೂಲಕ ವ್ಯಕ್ತಿಯಲ್ಲಿ ಶಿಸ್ತು ಬೆಳೆಯುತ್ತದೆ. ತರಗತಿಗೆ ಹಾಜರಾಗುವುದು ಹಾಗೂ ತರಗತಿಗಳನ್ನು ನಡೆಸುವುದು ಸಹ ಮಹತ್ವದ್ದಾಗಿದೆ.
ಶಿಕ್ಷಕರ ಜೀವನದ ಕ್ರಮವನ್ನೇ ಮಕ್ಕಳು ಅನುಸರಿಸುತ್ತಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ. ಮಾಲೆ ಮಾತನಾಡಿ, ‘ಆಚಾರ, ವಿಚಾರ, ಪ್ರಚಾರ ಎನ್ನುವ ತತ್ವವನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರೊ. ಜಗನ್ನಾಥ ಬಡಿಗೇರ ಪ್ರಾರ್ಥಿಸಿದರು. ಪ್ರೊ.ರಾಜಕುಮಾರ ಸಿಂಧೆ ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ವಿಜಯಕುಮಾರ ದೊಡ್ಡಗಾಣಿಗೇರ ಸ್ವಾಗತಿಸಿದರು. ಪ್ರೊ.ಗೋಪಾಲ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT