ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದೆ. ಆದ್ದರಿಂದ 930 ಕುಸೆಕ್ ನೀರು ಹೊರ ಹೋಗುತ್ತಿದೆ. ಈ ಕಾರಣ ಕಾಲುವೆ ಹಾಗೂ ನಾಲೆಯ ಸಮೀಪದ ಗ್ರಾಮಗಳಾದ ಖೇರ್ಡಾ, ಧನ್ನೂರ್ (ಆರ್), ಹಳ್ಳಿಖೇಡ್ (ಕೆ), ಕಿಣ್ಣಿಸಡಕ್, ಜಂಬಗಾ ಮತ್ತಿತರೆ ಗ್ರಾಮಗಳ ಜನರು ನಾಲೆ ದಾಟಬಾರದು. ಮಹಿಳೆಯರು ಬಟ್ಟೆಗಳನ್ನು ಸ್ವಚ್ಛಗೊಳಿಸಬಾರದು. ಜಾನುವಾರುಗಳಿಗೆ ನೀರಿನಲ್ಲಿ ಬಿಡಬಾರದು ಎಂದು ನೀರಾವರಿ ಇಲಾಖೆ ಜೆಇ ಚಂದ್ರಕಾಂತ ಕೇಳಿಕೊಂಡಿದ್ದಾರೆ.