ಮನೆಗಳಿಗೆ ತಲುಪದ ನೀರು: ಜೆಜೆಎಂ ಕಾಮಗಾರಿ ಬಗ್ಗೆ ಬೋರಾಳ ಗ್ರಾಮದ ಜನರ ಅಸಮಾಧಾನ
ಮನ್ಮಥಪ್ಪ ಸ್ವಾಮಿ
Published : 10 ಡಿಸೆಂಬರ್ 2025, 6:02 IST
Last Updated : 10 ಡಿಸೆಂಬರ್ 2025, 6:02 IST
ಫಾಲೋ ಮಾಡಿ
Comments
ಬೋರಾಳ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಪೂರ್ಣ ಪರಿಶೀಲನೆ ಮಾಡದೆ ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಹಾಗೂ ಪಿಡಿಒಗೆ ಮಾಹಿತಿ ನೀಡಿದರೂ ಅವರು ಹಸ್ತಾಂತರ ಮಾಡಿಕೊಂಡಿದ್ದಾರೆ. ಈ ಕುರಿತು ಜಿ.ಪಂ ಸಿಇಒ ಅವರಿಗೆ ದೂರು ನೀಡಿದ್ದೇನೆ
ಲಕ್ಷ್ಮಣ ದೇವಕತೆ, ರಾಜಾಧ್ಯಕ್ಷ, ಅಹಿಂದ ಯುವ ಘಟಕ
ನಮ್ಮ ಊರಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ಆಗಿಲ್ಲ. ಪೈಪ್‌ಲೈನ್ ವ್ಯವಸ್ಥೆ ಸರಿ ಇಲ್ಲ. ಬಾವಿ ಕೊರೆದಿಲ್ಲ. ಟ್ಯಾಂಕ್ ಕಟ್ಟಿದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಕಾಮಗಾರಿ ಪೂರ್ಣವಾಗಿದಿದ್ದರೂ ಗ್ರಾಮ ಪಂಚಾಯಿತಿಯವರು ಹಸ್ತಾಂತರ ಮಾಡಿಕೊಂಡಿದ್ದಾರೆ
ಉಮಾಕಾಂತ ಸೋನೆ, ಬೋರಾಳ ಗ್ರಾಮದ ನಿವಾಸಿ, ದಲಿತ ಸೇನೆ ತಾಲ್ಲೂಕು ಅಧ್ಯಕ್ಷ
ಬೋರಾಳದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು ಕೆಲವೊಂದು ಮನೆ ಹೊರತುಪಡಿಸಿ ಎಲ್ಲ ಮನೆಗಳಿಗೆ ನೀರು ಹೋಗುತ್ತಿದೆ. ಕೆಲ ಕಡೆ ಜಾನುವಾರು ಓಡಾಟದಿಂದ ನಲ್ಲಿಗಳು ಕಿತ್ತು ಹೋಗಿವೆ. ಅವು ಸರಿಪಡಿಸಲು ಗುತ್ತಿಗೆದಾರರಿಗೆ ಹೇಳಿದ್ದೇವೆ