ಸೋಮವಾರ, ಜುಲೈ 4, 2022
21 °C

ಕಲ್ಲಂಗಡಿ ಬೆಲೆ ಕುಸಿತ; ರೈತ ಕಂಗಾಲು

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಲ್ಲಂಗಡಿ ಬೆಳೆದ ರೈತರು ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೆರೆಯ ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾ ಗಿದ್ದು, ಕಲ್ಲಂಗಡಿಗೆ ಕೇಳುವವರು ಇಲ್ಲ ದಂತೆ ಆಗಿದೆ. ಇದರಿಂದ ಬಹು ತೇಕ ಬೆಳೆಗಾರರು ಕಲ್ಲಂಗಡಿ ಹಣ್ಣು ಕಟಾವು ಮಾಡಿ ಮಾರಾಟ ಮಾಡದೇ ಜಮೀನಿ ನಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ.

ಫೆಬ್ರವರಿಯಲ್ಲಿ ಬೆಳೆದ ಕಲ್ಲಂಗಡಿ ಈಗ ಕಟಾವಿಗೆ ಬಂದಿದೆ. ಪ್ರತಿ ಬಾರಿ ಒಂದು ಕೆಜಿಗೆ ₹ 10ರಂತೆ ಮಾರಾಟ ಆಗುತ್ತಿತ್ತು. ಆದರೆ, ಸದ್ಯ ಎಲ್ಲೆಡೆ ಇಳುವರಿ ಚೆನ್ನಾಗಿ ಬಂದಿದೆ. ಈಗ ಪ್ರತಿ ಕೆ.ಜಿಗೆ ಕೇವಲ ₹3ರಂತೆ ಮಾರಾಟ ಆಗುತ್ತಿದೆ. ಇದರಿಂದ ಕಲ್ಲಂಗಡಿ ಬೆಳೆಗಾ ರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತ ಶಿವಕುಮಾರ ಅಲವತ್ತುಕೊಂಡರು.

ಇಲ್ಲಿಯ ರೈತ ಸುರೇಶ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಉತ್ತಮ ಇಳುವರಿ ಸಹ ಬಂದಿದೆ. ಈ ಬಾರಿ ದುಪ್ಪಟ್ಟು ಪ್ರಮಾಣದಲ್ಲಿ ಲಾಭ ಪಡೆಯಬಹುದು ಎಂಬ ಆಸೆ ಇತ್ತು. ಆದರೆ ಬೆಲೆ ಕುಸಿತ ನನ್ನ ಆಸೆಯ ಮೇಲೆ ತಣ್ಣೀರು ಎರಚಿದೆ ಎಂದು ಅಳಲು ತೋಡಿಕೊಂಡರು.

ಉತ್ತಮ ಬೆಲೆ ಸಿಕ್ಕಿದ್ದರೆ ಕನಿಷ್ಠ ₹3 ಲಕ್ಷ ಆದಾಯ ಆಗುತ್ತಿತ್ತು. ಖರ್ಚು ಕಳೆದು ಲಾಭವೂ ಸಿಗುತ್ತಿತ್ತು. ಆದರೆ ಈಗ ನಯಾಪೈಸೆ ಸಿಕ್ಕಿಲ್ಲ. ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ಸುರೇಶ ಒತ್ತಾಯಿಸುತ್ತಾರೆ.

ಬೀದರ್ ಜಿಲ್ಲೆಯಾದ್ಯಂತ ಕಲ್ಲಂಗಡಿ ಬೆಳೆದ ರೈತರು ಸಾಮಾನ್ಯವಾಗಿ ಹೈದ ರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತಾರೆ. ಆದರೆ, ಹೈದರಾಬಾದ್‌ನಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಹಣ್ಣು ಖರೀದಿಸಲು ಮಧ್ಯವರ್ತಿಗಳು ಮುಂದೆ ಬರುತ್ತಿಲ್ಲ ಎಂದು ರೈತ ಭದ್ರು ಭವರಾ ತಿಳಿಸುತ್ತಾರೆ.

ತೋಟಗಾರಿಕೆ ಇಲಾಖೆ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಲ್ಲಂಗಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುವುದು ರೈತರ ಆಗ್ರಹವಾಗಿದೆ.

ಕಲ್ಲಂಗಡಿ ಹಣ್ಣಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸುವ ಮೂಲಕ ರೈತರಿಗೆ ನೆರವಾಗಬೇಕು.

-ನಿರ್ಮಲಕಾಂತ ಪಾಟೀಲ, ರೈತ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು