ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಹಂದಿಗಳ ದಾಳಿಗೆ ಬೀದರ್‌ನ ಕೆಲ ಹಳ್ಳಿಗಳಲ್ಲಿ ಬೆಳೆ ಹಾನಿ

Last Updated 5 ಜುಲೈ 2020, 10:47 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ಚ್ಯಾಂಡೇಶ್ವರ, ಸೋನಾಳ, ಹೊರಂಡಿ ಹಾಗೂ ಡಿಗ್ಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಹಂದಿ ಹಾವಳಿ ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ.

‘ಕೃಷಿ ವೆಚ್ಚ ಹೆಚ್ಚುತ್ತಿದೆ. ಬೆಳೆಗಾರರು ತೊಂದರೆಯಲ್ಲಿದ್ದಾರೆ. ಇದರ ಜತೆಗೆ ಹಂದಿ ಕಾಟ ಹೆಚ್ಚಾಗಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ರೈತ ಪ್ರವೀಣ ಧಬಾಲೆ ತಿಳಿಸಿದರು.

ಸಾಲ ಮಾಡಿ ಬೆಳೆದ ಬೆಳೆ ಹಂದಿ ಪಾಲಾಗುತ್ತಿದೆ. 7 ಖಂಡಕಿ ಉದ್ದ ಬೆಳೆದ ಕಬ್ಬಿಗೆ ಹಾನಿಯಾಗುತ್ತಿದೆ. ಹಂದಿಗಳಿಂದಾಗಿ ಎಲೆಗಳು ರಾಶಿ ರಾಶಿ ಬಿದ್ದು ಮಣ್ಣು ಪಾಲಾಗುತ್ತಿವೆ ಎಂದು ಹೇಳಿದರು.

ರೈತರು ಬೆಳೆ ಕಳೆದುಕೊಂಡು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.

ಜಿಂಕೆ ಕಾಟ ಮತ್ತು ಹಂದಿ ಕಾಟ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಶಿವಕುಮಾರ ಧಬಾಲೆ, ವಿಷ್ಣುಕಾಂತ ರಾಂಪೂರೆ ಹಾಗೂ ಉಮಾಕಾಂತ ಮುರ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT