ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಪ್ರಗತಿಗೆ ನಾರಿಯರ ಕೊಡುಗೆ ಅಪಾರ’

Last Updated 21 ಮಾರ್ಚ್ 2023, 5:20 IST
ಅಕ್ಷರ ಗಾತ್ರ

ಭಾಲ್ಕಿ: ‘ದೇಶದ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಅಪಾರ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಪುರಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದರ ಪರಿಣಾಮ ದೇಶ ಸಶಕ್ತವಾಗಿ ಬೆಳೆದಿದೆ ಎಂದು ತಿಳಿಸಿದರು.

ಮಲ್ಲಮ್ಮ ಪಾಟೀಲ ವಿಶೇಷ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ವಿಜಯಲಕ್ಷ್ಮಿ ಗುದಗೆ, ಸ್ವಾತಿ ಲೋಕೇಶ, ಸತ್ಯಶೀಲ ಕುಮಾರಿ ನೆಲ್ವಾಡೆ, ಪೂರ್ಣಿಮಾ ಪಾಟೀಲ, ಭಾಗ್ಯಶ್ರೀ, ಜ್ಯೋತಿ ರವಿ, ಅರ್ಚನಾ ಪವಾರ್ ಸೇರಿ ಸುಮಾರು 120 ಶಿಕ್ಷಕಿಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ರಾಧಾ ಬಹೇನಜಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕೀರ್ತಿಲತಾ ಹೊಸಾಳೆ, ಸಾರಿಕಾಗಂಗಾ, ರಾಜಕುಮಾರ ಗಂದಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ್ ಹುಸೇನ್, ಮನೋಹರ ಹೋಳ್ಕರ್, ರಾಜಪ್ಪ, ಶಾಂತಮ್ಮ ಬಿರಾದಾರ, ಶರಣಮ್ಮ ನಾರಾಯಣ, ಭುವನೇಶ್ವರಿ ಸೂರ್ಯಕಾಂತ ಸುಂಟೆ ಹಾಗೂ ನಾಗಭೂಷಣ ಮಾಮಡಿ ಇದ್ದರು. ಪ್ರಭಾವತಿ ಬೀಗೆ ನಿರೂಪಿ ಸಿದರು. ಬಾಲಿಕಾ ಉಮಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT