ಚಿಟಗುಪ್ಪಾ: ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದ ತಾಲ್ಲೂಕು ಪಂಚಾಯಿತಿಗಳಿಗೆ ಸರ್ಕಾರ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಮಂಜೂರು ಮಾಡಬೇಕು ಎಂದು ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ಮಸ್ತಾನ ನೂರೋದ್ದೀನ್ ಅವರು ಆಗ್ರಹಿಸಿದ್ದಾರೆ.ಭಾನುವಾರ ಮನ್ನಾ ಏಖ್ಖೇಳಿಯಲ್ಲಿ ನಡೆದ ಬೀದರ್ ಜಿಲ್ಲೆಯ ಐದು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ, ಸರ್ಕಾರ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕೊಡುವ ಅನುದಾನದಲ್ಲಿ ಪ್ರತಿಶತ 30ರಷ್ಟು ತಾಲ್ಲೂಕು ಪಂಚಾಯಿತಿಗಳಿಗೆ ವಿತರಿಸಬೇಕು ಎಂದು ತಿಳಿಸಿದರು.

ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಸದಸ್ಯ ಬಾಬುರಾವ ಟೈಗರ್ಪ್ರಾಸ್ತಾವಿಕ ಮಾತನಾಡಿ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಪ್ರತಿ ತಾಲ್ಲೂಕು ಪಂಚಾಯಿತಿಗೆ ಕೊಡುತ್ತಿರುವ ಒಂದು ಕೋಟಿ ರೂ. ಅನುದಾನ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕೊಡುವ ಅನುದಾನಕ್ಕೆ ಹೋಲಿಸಿದಲ್ಲಿ ಪ್ರತಿ ಶತ 30 ರಷ್ಟೂ ತಾಲ್ಲೂಕು ಪಂಚಾಯಿತಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ತಾಲ್ಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಸುವುದಕ್ಕಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಒಕ್ಕೂಟದ ವೇದಿಕೆ ರೂಪಿಸುವುದಕ್ಕಾಗಿ ಪೂರ್ವಭಾವಿ ಸಭೆ ಎರ್ಪಡಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ವೇದಿಕೆ ಅಸ್ತಿತ್ವಕ್ಕೆ ತಂದು ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿವಿಧ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಅಶೋಕ ಪಾಟೀಲ್, ಶಿವಕುಮಾರ ದೇಶಮುಖ, ಸಂಜೀವರೆಡ್ಡಿ ಹಾಸರೆಡ್ಡಿ, ವೆಂಕಟರೆಡ್ಡಿ ಸೇರಿಕಾರ ಇತರರು ಮಾತನಾಡಿ, ಪ್ರತಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರ ವಾಹನ ಸೌಕರ್ಯ ಕಲ್ಪಿಸಬೇಕು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಿಡುಗಡೆ ಆಗುವ ಅನುದಾನದಲ್ಲಿ ಪ್ರತಿಶತ 50 ಗ್ರಾಮ ಪಂಚಾಯಿತಿಗಳಿಗೆ ಪ್ರತಿ ಶತ 50 ಜಿಪಂ, ತಾಪಂ ಗಳಿಗೆ ವಿತರಿಸಬೇಕು, ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ಸಭೆಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಸಬೇಕು, ತಾಲ್ಲೂಕಿನ ಸಮಗೃ ಅಭಿವೃದ್ಧಿ ವಿಷಯದಲ್ಲಿ ಸರ್ವ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗಣನೇಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವ ಸದಸ್ಯರು ಬೀದರ್ ಜಿಲ್ಲಾ ತಾಲ್ಲೂಕು ಪಂಚಾಯಿತಿ ಸದಸ್ಯರ ಒಕ್ಕೂಟ ರಚಿಸಿ, ಬಾಬು ಟೈಗರ್ ಅಧ್ಯಕ್ಷ, ಅಶೋಕ ಪಾಟೀಲ ಗೌರವ ಅಧ್ಯಕ್ಷರನ್ನಾಗಿ ನೇಮಿಸಿದರು.

ಬೀದರ್ ತಾಪಂ ಅಧ್ಯಕ್ಷ ಗಣಪತರಾವ ರಾಠೋಡ್, ಔರಾದ್ ತಾಪಂ ಅಧ್ಯಕ್ಷ ಶ್ರೀರಂಗ ಪರಿಹಾರ, ಭಾಲ್ಕಿ ತಾಪಂ ಅಧ್ಯಕ್ಷ ಅಂಬಣ್ಣ ವಾಗದಾಳೆ, ವಿವಿಧ ತಾಪಂನ ಉಪಾಧ್ಯಕ್ಷರಾದ ಉಮಾದೇವಿ ಬಸವರಾಜ್, ಜಯಶ್ರೀ ವಿಠಲರಾವ್, ಶಾಹೇದಾಬೇಗಂ, ರಿಹಾನಾ ಬೇಗಂ, ಗೀತಾ ಅಂಬಾದಾಸ್ ವೇದಿಕಯಲ್ಲಿದ್ದರು. ತಾಪಂ ಸದಸ್ಯ ಸಂಜೀವ ರೆಡ್ಡಿ ಹಾಸರೆಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.