ಔರಾದ್: ಇಲ್ಲಿಯ ಬಸ್ ನಿಲ್ದಾಣದಲ್ಲಿ ಗಲೀಜಾಗಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.
ನಿಲ್ದಾಣದ ಖಾಲಿ ಜಾಗದಲ್ಲಿ ಕಸದ ರಾಶಿ ಬಿದ್ದು ಸುತ್ತಲೂ ಗಬ್ಬು ವಾಸನೆ ಬರುತ್ತಿದೆ. ಮತ್ತೊಂದೆಡೆ ಖಾಲಿ ಜಾಗ ಮೂತ್ರಾಲಯವಾಗಿ ಬಳಕೆಯಾಗಿ ನಿಲ್ದಾಣದಲ್ಲಿ ನೈರ್ಮಲ್ಯ ಸಮಸ್ಯೆ ನಿರ್ಮಾಣವಾಗಿದೆ. ನಿತ್ಯ ಕಸ ಗೂಡಿಸದೆ ಇರುವುದು ನಿಲ್ದಾಣದ ಒಳಗೂ ಹೊರಗೂ ಪ್ರಯಾಣಿಕರಿಗೆ ಕಸದ ಸ್ವಾಗತ ಸಿಗುತ್ತಿದೆ.

ಈ ಕುರಿತು ಬಸ್ ನಿಲ್ದಾಣದ ಮೇಲ್ವಿಚಾರಕರನ್ನು ವಿಚಾರಿಸಿದರೆ `ಅಕ್ಕಪಕ್ಕದ ಅಂಗಡಿ ಮತ್ತು ಮನೆಯವರು ನಿಲ್ದಾಣದೊಳಗೆ ಕಸ ತಂದು ಹಾಕುತ್ತಿದ್ದಾರೆ. ಪಟ್ಟಣ ಪಂಚಾಯಿತಿಯವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ದೂರುತ್ತಾರೆ.

`ಕಸ ಗೂಡಿಸುವವರು ನಿತ್ಯ ಬರುವುದಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬಿದ್ದು ಪ್ರಯಾಣಿಕರು ಆಕ್ಷೇಪಿಸುವಂತಾಗಿದೆ. ಈ ವಿಷಯ ಘಟಕ ವ್ಯವಸ್ಥಾಪಕರ ಗಮನಕ್ಕೂ ತರಲಾಗಿದೆ' ಎನ್ನುತ್ತಾರೆ.

`ನಿಲ್ದಾಣದ ಸುತ್ತ ಖಾಸಗಿ ವಾಹನಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ನಿಲ್ದಾಣದ ಎರಡೂ ದ್ವಾರಗಳು ಆಕ್ರಮಿಸಿ ಬಸ್ಗಳು ಓಡಾಡಲು ಅಡ್ಡಿಪಡಿಸುತ್ತಿವೆ.

ನಿಲ್ದಾಣ ಎದುರಿನ ರಸ್ತೆ ಮೇಲಿನ ವ್ಯಾಪಾರವೂ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಸಲ ಲಿಖಿತ ಮನವಿ ಸಲ್ಲಿಸಿದರೂ ಖಾಸಗಿ ವಾಹನಗಳ ಹಾವಳಿ ತಪ್ಪುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳಿವೆ.

ಹೊಸದಾಗಿ ತಂದ ಕಸ ಸಂಗ್ರಹ ತೊಟ್ಟಿಗಳು ಅಲ್ಲಲ್ಲಿ ಇಟ್ಟು ಆಗಾಗ ವಿಲೇವಾರಿ ಮಾಡಿದರೆ ಪಟ್ಟಣದಲ್ಲಿ ನೈರ್ಮಲ್ಯ ಸಮಸ್ಯೆ ಆಗುವುದಿಲ್ಲ.

ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಿವಿಧ ಜನಪರ ಸಂಘಟನೆಗಳು ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.