ಸಂಪರ್ಕ ಸಾಧಿಸಲು ನದಿಗೆ ಸೇತುವೆ: ಸಂಸದ ಡಿ.ಕೆ.ಸುರೇಶ್‌

7

ಸಂಪರ್ಕ ಸಾಧಿಸಲು ನದಿಗೆ ಸೇತುವೆ: ಸಂಸದ ಡಿ.ಕೆ.ಸುರೇಶ್‌

Published:
Updated:
Deccan Herald

ಕನಕಪುರ: ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಅರ್ಕಾವತಿ ನದಿಗೆ ಚೆಕ್‌ ಡ್ಯಾಂ, ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಹಳ್ಳಾಸಂದ್ರದಿಂದ ರಾಮನಗರ ರಸ್ತೆಗೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ₹2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ರಾಮನಗರ ರಸ್ತೆಯಿಂದ ಹಳ್ಳಾಸಂದ್ರ, ತುಂಗಣಿ, ವರಗೇರಹಳ್ಳಿ, ರಾಯಸಂದ್ರ, ತೊಪ್ಪಗನಹಳ್ಳಿ, ಕುರಿಗೌಡನದೊಡ್ಡಿ ಸೇರಿದಂತೆ ಸುತ್ತಮುತ್ತಲ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಕನಕಪುರದ ಮೂಲಕ ಹೋಗಬೇಕಿತ್ತು. ಈ ಭಾಗದ ಜನರು ಹಲವು ವರ್ಷಗಳಿಂದ ಇಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ ಇತ್ತು ಎಂದು ಸುರೇಶ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸಪ್ಪ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಧನಂಜಯ, ಮಾಜಿ ಅಧ್ಯಕ್ಷ ರಾಜಶೇಖರ್‌, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ, ಪಾರ್ಥ, ಮುಖಂಡರಾದ ಧನಂಜಯ, ನಾಗೇಶ್‌, ಜೈರಾಮು, ಎ.ನಾಗೇಶ್‌, ನಾಗೇಂದ್ರಕುಮಾರ್‌, ಕಾಂತರಾಜು, ಪ್ರಸನ್ನಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !