ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಯಡಿಯೂರಪ್ಪ ಆಗ್ರಹ

7

ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಯಡಿಯೂರಪ್ಪ ಆಗ್ರಹ

Published:
Updated:

ಶಿವಮೊಗ್ಗ: ವಿಧಾನಸೌಧದಲ್ಲಿ ನಡೆದ ಹಣದ ವ್ಯವಹಾರದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಬಳಿ ಕೆಲಸ ಮಾಡುತ್ತಿದ್ದ ಮೋಹನ್ ₹ 25.76 ಲಕ್ಷ ಸಮೇತ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಎಫ್ಐಆರ್ ಆಗಿದೆ. ಆತನೇ ನೀಡಿದ ಹೇಳಿಕೆ ಪ್ರಕಾರ ಇದು ಸಚಿವರಿಗೆ ಸೇರಿದ ಹಣ. ಕವರ್‌ ಮೇಲೆ ಸಚಿವರ ಹೆಸರು ನಮೂದಿಸಲಾಗಿದೆ. ಈ ಇಡೀ ಘಟನೆಯ ಸುತ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ...

ಸಚಿವ ಪುಟ್ಟರಂಗ ಶೆಟ್ಟಿ ಟೈಪಿಸ್ಟ್‌ ಬಳಿ ₹25.76 ಲಕ್ಷ ಪತ್ತೆ !

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !