ಬುಧವಾರ, ಸೆಪ್ಟೆಂಬರ್ 30, 2020
26 °C

ಚಾಮರಾಜನಗರ: 15 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆಯು 2020–21 ನೇ ಸಾಲಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 15 ಶಿಕ್ಷಕರನ್ನು ಆಯ್ಕೆ ಮಾಡಿದೆ. 

ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಶನಿವಾರ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.  

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಮೂರೂ ವಿಭಾಗಗಳಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳ ತಲಾ ಒಬ್ಬೊಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. 

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಾಮರಾಜನಗರ ತಾಲ್ಲೂಕಿನ ವಡ್ಡರಹಳ್ಳಿ ಶಾಲೆಯ ಪಿ.ಕುಮಾರ್, ಗುಂಡ್ಲುಪೇಟೆ ತಾಲ್ಲೂಕಿನ ಮೂಕಹಳ್ಳಿ ಕಾಲೋನಿ-2ರ ಶಾಲೆಯ ಸಿ.ಗಾಯತ್ರಿ, ಕೊಳ್ಳೇಗಾಲ ತಾಲ್ಲೂಕಿನ ಉಪ್ಪಲಗೇರಿ ಶಾಲೆಯ ಆರ್.ರಾಜು, ಹನೂರು ತಾಲ್ಲೂಕಿನ ಕರಿಯಪ್ಪನ ದೊಡ್ಡಿ‌ ಶಾಲೆಯ ಡಿ. ದಿವ್ಯಾರಾಣಿ, ಯಳಂದೂರು ತಾಲ್ಲೂಕಿನ ದಾಸನಹುಂಡಿ ಶಾಲೆಯ ಎಲ್. ಸುಜಾತ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಾಮರಾಜನಗರ ತಾಲ್ಲೂಕಿನ ಮಂಗಲ ಶಾಲೆಯ ನಂಜುಂಡಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಶಾಲೆಯ ದೈಹಿಕ ಶಿಕ್ಷಕಿ ಅನ್ನಪೂರ್ಣಮ್ಮ, ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಶಾಲೆಯ ವಸಂತಕುಮಾರಿ, ಹನೂರು ತಾಲ್ಲೂಕಿನ ಕಣ್ಣೂರು ಶಾಲೆಯ ಟಿ.ಜಿ.ಟಿ ಶಿಕ್ಷಕ‌ ಸಾವುಕರಾಜು, ಯಳಂದೂರು ತಾಲ್ಲೂಕಿನ ಅಲ್ಕೆರೆ ಶಾಲೆಯ ಟಿ.ಜಿ.ಟಿ ಶಿಕ್ಷಕ ಎನ್. ದಿವಾಕರ್.

ಪ್ರೌಢಶಾಲಾ ವಿಭಾಗ: ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯ ಪ್ರೌಢಶಾಲೆಯ ಎಂ.ಎಲ್. ಸುರೇಶ್‌ಕುಮಾರ್, ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಮದ್ದಾನೇಶ್ವರ ಪ್ರೌಢಶಾಲೆಯ ರಾಜೇಂದ್ರ, ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಪ್ರೌಢಶಾಲೆಯ ಪಿ.ಎಂ.ಮಹದೇವಸ್ವಾಮಿ, ಹನೂರು ತಾಲ್ಲೂಕಿನ ಚೆನ್ನಲಿಂಗನಹಳ್ಳಿ ಪ್ರೌಢಶಾಲೆಯ ಕೃಷ್ಣಸಾ ರಾಮಚಂದ್ರಸಾ ಬಾಕಳೆ, ಯಳಂದೂರು ಬಾಲಕಿಯರ ಪ್ರೌಢಶಾಲೆಯ ಎನ್.ಮಹದೇವ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು