ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಇಟಿ ಸರಾಗ: 3,210 ಮಂದಿ ಹಾಜರಿ

Last Updated 4 ಅಕ್ಟೋಬರ್ 2020, 14:26 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಯಾವುದೇ ಅಡೆತಡೆಗಳಿಲ್ಲದೇ ನಡೆಯಿತು. ಒಟ್ಟು 3,210 ಅಭ್ಯರ್ಥಿಗಳು ಪರೀಕ್ಷೆ ಬರೆದರು.

ಬೆಳಿಗ್ಗೆ ಪತ್ರಿಕೆ–1 (ಪ್ರಾಥಮಿಕ ಶಾಲಾ ಶಿಕ್ಷಕ–ಟಿಇಡಿ ಮಾಡಿದವರಿಗಾಗಿ) ಮತ್ತು ಮಧ್ಯಾಹ್ನದ ಮೇಲೆ ಪತ್ರಿಕೆ–2 (ಪ್ರೌಢಶಾಲಾ ಶಿಕ್ಷಕ–ಡಿಇಡಿ ಮಾಡಿದವರಿಗಾಗಿ) ಪರೀಕ್ಷೆ ನಡೆಯಿತು. ಬೆಳಿಗ್ಗೆಯ ಪರೀಕ್ಷೆ ಆರು ಮತ್ತು ಮಧ್ಯಾಹ್ನದ ಪರೀಕ್ಷೆ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.

‘ಪತ್ರಿಕೆ–1’ ಬರೆಯಲು 1,478 ಮಂದಿ ನೋಂದಣಿ ಮಾಡಿಕೊಂಡಿದ್ದರು. 299 ಮಂದಿ ಗೈರು ಹಾಜರಾಗಿ, 1,187 ಮಂದಿ ಪರೀಕ್ಷೆ ಬರೆದಿದ್ದಾರೆ. ‘ಪತ್ರಿಕೆ–2’ಕ್ಕೆ 2,394 ಮಂದಿ ನೋಂದಣಿ ಮಾಡಿಕೊಂಡಿದ್ದರು. 2,023 ಮಂದಿ ಹಾಜರಾಗಿದ್ದು, 371 ಪರೀಕ್ಷೆ ಬರೆದಿಲ್ಲ.

ಮುಂಜಾಗ್ರತಾ ಕ್ರಮ: ‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗಿತ್ತು. ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್‌–19 ದೃಢಪಟ್ಟಿದ್ದ ಒಬ್ಬರಿಗೆ ಬೇಡರಪುರದಲ್ಲಿರುವ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT