ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದ ಕೇರಳ ರಸ್ತೆಯ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇರಳದಿಂದ ತಂದ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ವಾಹನ ಚಾಲಕನಿಗೆ ಪುರಸಭೆ ಅಧಿಕಾರಿಗಳು ಬುಧವಾರ ₹5000 ದಂಡ ವಿಧಿಸಿದ್ದಾರೆ.
ಈಷರ್‌ನಲ್ಲಿ ಚಾಲಕ ಕೇರಳದಿಂದ ಬಂದು ಬಾಳೆ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿಯಲ್ಲಿ ಸುರಿಯುತ್ತಿದ್ದ. ಈ ವೇಳೆ ಪುರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದು, ದಂಡ ವಿಧಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ, ಆರೋಗ್ಯಾಧಿಕಾರಿ ಗೋಪಿ, ಪರಿಸರ ಅಧಿಕಾರಿ ಮಹೇಶ್, ಪರಮೇಶ್ವರಪ್ಪ ಇತರರು ಹಾಜರಿದ್ದರು.