ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಪತ್ತೆಯ ನಿಪುಣ ಬಂಡೀಪುರ ‘ರಾಣಾ‘ ಇನ್ನಿಲ್ಲ

9 ವರ್ಷದ ಜರ್ಮನ್‌ ಶೆಫರ್ಡ್‌ ತಳಿಯ ಶ್ವಾನ ಅನಾರೋಗ್ಯದಿಂದ ಸಾವು
Last Updated 2 ಆಗಸ್ಟ್ 2022, 5:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶ್ವಾನ ದಳದ ‘ರಾಣಾ’ ಸೋಮವಾರ ರಾತ್ರಿ ಮೃತಪಟ್ಟಿದೆ.

ಒಂಬತ್ತು ವರ್ಷ ವಯಸ್ಸಿನ ಜರ್ಮನ್‌ ಶೆಫರ್ಡ್‌ ತಳಿಯ ರಾಣಾ ವಾರದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಸೋಮವಾರ ಅದರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿತ್ತು. ಸಿಬ್ಬಂದಿ ಗುಂಡ್ಲುಪೇಟೆಯ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸಂಜೆಯ ಬಳಿಕ ವಾಂತಿ ಭೇದಿ ಕಾಣಿಸಿಕೊಂಡಿತ್ತು. ರಾತ್ರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಡುಗಳ್ಳರಿಗೆ ಸಿಂಹಸ್ವಪ್ನ: ಅರಣ್ಯ ಅಪರಾಧ ಪತ್ತೆಗಾಗಿ ಅರಣ್ಯ ಇಲಾಖೆಯು ರಾಜ್ಯದಲ್ಲೇ ಮೊದಲ ಬಾರಿಗೆ 2015ರಲ್ಲಿ ಬಂಡೀಪುರದಲ್ಲಿ ‘ರಾಣಾ’ನನ್ನು ನಿಯೋಜಿಸಿತ್ತು. ಮಧ್ಯಪ್ರದೇಶ ಭೋಪಾಲ್‌ನಲ್ಲಿ 11 ತಿಂಗಳು ತರಬೇತಿ ಪಡೆದು ಬಂದಿದ್ದ ಠಾಣಾ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿತ್ತು.

ರಾಣಾ
ರಾಣಾ

ಬಂಡೀಪುರ ಮಾತ್ರವಲ್ಲದೇ, ನಾಗರಹೊಳೆ, ಕೊಡಗು ಸೇರಿದಂತೆ ಬೇರೆ ಕಡೆಗಳಲ್ಲೂ ಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಸೂಕ್ಷ್ಮ ಮತಿ, ಬುದ್ಧಿವಂತಿಕೆಗೆ ಹೆಸರಾಗಿದ್ದ ರಾಣಾ, ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದ ಅನೇಕ ಪ್ರಕರಣಗಳನ್ನೂ ‘ರಾಣಾ’ ಭೇದಿಸಿತ್ತು.ವನ್ಯಜೀವಿಗಳ ಇರುವಿಕೆ ಹಾಗೂ ಜಾಡನ್ನು ಹಲವು ಕಿ.ಮೀ ದೂರದಿಂದಲೇ ಪತ್ತೆ ಹಚ್ಚುವುದರಲ್ಲೂ ನಿಷ್ಣಾತವಾಗಿದ್ದ ಈ ಶ್ವಾನದ ನೆರವನ್ನು ಹುಲಿಗಳ ಸೆರೆ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ಬಳಸುತ್ತಿದ್ದರು.

ರಾಣಾಗೆ ನಿವೃತ್ತಿ ವಯಸ್ಸು ಸಮೀಪಿಸುತ್ತಿದ್ದರಿಂದ ಬಂಡೀಪುರ ಅಧಿಕಾರಿಗಳು, ಅದರ ಜಾಗ ತುಂಬಲು ಮುಧೋಳ ತಳಿಯ ನಾಯಿ ಮರಿಯನ್ನು ಖರೀದಿಸಿದ್ದರು. ಅದಕ್ಕೆ ತರಬೇತಿ ನೀಡಲಾಗಿದ್ದು, ಬಂಡೀಪುರದಲ್ಲಿ ನಿಯೋಜಿಸಲಾಗಿದೆ. ಅರಣ್ಯ ಅಪರಾಧ ಪತ್ತೆ ಹಚ್ಚುವ ಬಗ್ಗೆ ಹೊಸ ಶ್ವಾನಕ್ಕೆ ತರಬೇತಿ ನೀಡಲು ಸಿಬ್ಬಂದಿ ರಾಣಾನ ನೆರವನ್ನೂ ಪಡೆದಿದ್ದರು.

ಬಂಡೀಪುರದಲ್ಲಿ ಪ್ರಿನ್ಸ್ ಎಂಬ ಹೆಸರಿನ ಹುಲಿ ಕಾಣೆಯಾಗಿದ್ದಾಗ, ಅದನ್ನು ಪತ್ತೆ‌ ಹಚ್ಚುವಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿತ್ತು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ‌ನಡೆಸಲು ಇಲಾಖೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT