ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ದೇವರನ್ನು ಪಲ್ಲಕ್ಕಿಯಲ್ಲಿ ಸೋಮವಾರ ರಾತ್ರಿ ಮೆರವಣಿಗೆ ಮಾಡಲಾಯಿತು. ಭಕ್ತರು ದೇವರಿಗೆ ವಿವಿಧ ನೈವೇದ್ಯಗಳನ್ನು ಅರ್ಪಿಸುವ ಮೂಲಕ ಹರಕೆಗಳನ್ನು ತಿರಿಸಿದರು. ಹಲವು ವರ್ಷಗಳಿಂದಲೂ ಕಾಯಿ ಹೊಡೆಯುವುದು ಜಾತ್ರೆಯ ವಿಶೇಷವಾಗಿದ್ದು, ಮೆರವಣಿಗೆ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಯಿಯನ್ನು ಸುತ್ತಿಸಿ ದೇವಾಲಯದ ಬಳಿ ಬಂದ ನಂತರ ಹೊಡೆಯಲಾಗುತ್ತದೆ. ಈ ವೇಳೆ ನಾರು ಕಟ್ಟಿ ಕಾಯಿ ಎಸೆಯುವವರು ಮತ್ತು ಕಾಯಿ ಹೊಡೆಯುವವರ ಉತ್ಸಾಹ ಇಮ್ಮಡಿಗೊಂಡಿತು. ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದರಿಂದ ಜಾತ್ರೆಗೆ ಮತ್ತಷ್ಟು ಮೆರಗು ತಂದಿತು.