ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ| ನಾಲೆಗೆ ಬಿದ್ದ ಬೈಕ್: ಸವಾರ ಸಾವು

Published 2 ಆಗಸ್ಟ್ 2023, 15:45 IST
Last Updated 2 ಆಗಸ್ಟ್ 2023, 15:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರು ಕಬಿನಿ ನಾಲೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಬಾಗಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಲಿಂಗರಾಜು (35) ಮೃತಪಟ್ಟವರು. ಅವರು ಮೇವು ತೆಗೆದುಕೊಂಡು ಕಬಿನಿ ನಾಲೆ ರಸ್ತೆಯಲ್ಲಿ ಬರುವಾಗ ಆಯತಪ್ಪಿ ವಾಹನ ಸಮೇತ ನಾಲೆಗೆ ಬಿದ್ದಿದ್ದಾರೆ. ಲಿಂಗಣಾಪುರ ಬಳಿ ಹರಿಯುವ ಕಬಿನಿ ನಾಲೆಯಲ್ಲಿ ಬುಧವಾರ ಶವ ಪತ್ತೆಯಾಗಿದೆ. ಕುದೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT