ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಾಚ್ಯ ಶಬ್ದಗಳಿಂದ ನಿಂದನೆ; ಪುಟ್ಟರಂಗಶೆಟ್ಟಿ ಬಹಿರಂಗ ಕ್ಷಮೆ ಕೋರಲಿ: ನಿಜಗುಣರಾಜು

Last Updated 19 ಡಿಸೆಂಬರ್ 2020, 10:49 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌, ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಏಕವಚನದಲ್ಲಿ ಕರೆದಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಎಲ್ಲರ ಕ್ಷಮೆಯನ್ನು ಬಹಿರಂಗವಾಗಿ ಕೇಳಬೇಕು’ ಎಂದು ಬಿಜೆಪಿ ಮುಖಂಡ ನಿಜಗುಣರಾಜು ಅವರು ಆಗ್ರಹಿಸಿದರು.

ಅಶ್ಲೀಲ ಪದಗಳಲ್ಲಿ ಬೈಯುತ್ತಿರುವ ಆಡಿಯೊ ವೈರಲ್‌ ಆಗಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಐದಾರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಚಿವ ಸುರೇಶ್‌ಕುಮಾರ್‌, ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ಅನುಭವವುಳ್ಳ ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಶಾಸಕ ಪುಟ್ಟರಂಗಶೆಟ್ಟಿ ಅವರು ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ. ಇಂತಹ ಮಾತುಗಳನ್ನು ಕೇಳಿ ಜನರು ನಾಚಿಕೆ ಪಡುವಂತಾಗಿದೆ’ ಎಂದರು.

‘ಬಳಸಿರುವ ಅಶ್ಲೀಲ ಪದಗಳಿಗಾಗಿ ಪುಟ್ಟರಂಗಶೆಟ್ಟಿ ಅವರು ಬಹಿರಂಗ ಕ್ಷಮೆ ಕೇಳಬೇಕು. ಇದೇ ತಿಂಗಳ ಒಳಗಾಗಿ ಕ್ಷಮೆ ಕೇಳದಿದ್ದರೆ ನಾವು ಅವರ ಕಚೇರಿ ಎಂದು ಪ್ರತಿಭಟನೆ ನಡೆಸುತ್ತೇವೆ’ ಎಂದು ನಿಜಗುಣರಾಜು ಅವರು ಹೇಳಿದರು.

‘ಎಂಟು ತಿಂಗಳು ಸಚಿವರಾಗಿದ್ದಾಗ ಪುಟ್ಟರಂಗಶೆಟ್ಟಿ ಅವರು ಎಷ್ಟು ಕೆರೆಗಳನ್ನು ತುಂಬಿಸಿದ್ದಾರೆ? ಅವಕಾಶ ಇರುವಾಗ ಮಾಡದೆ ಈಗ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಖಾತೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದವರು ಬೇರೆಯವರರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಶೋಭೆ ತರುವ ಕೆಲಸವಲ್ಲ. ಈ ಮಾತುಗಳು ಶಾಸಕರು ಬೆಳೆದು ಬಂದ ಸಂಸ್ಕೃತಿಯನ್ನು ತೋರಿಸುತ್ತದೆ. ಪುಟ್ಟರಂಗಶೆಟ್ಟಿ ಅವರು ಮೌಲ್ಯಾಧರಿತ ಜೀವನ ನಡೆಸುತ್ತಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಬಾಲರಾಜು, ನಗರಸಭಾ ಸದಸ್ಯ ಶಿವರಾಜ್‌, ಬಿಜೆಪಿ ಮುಖಂಡರಾದ ಹನುಮಂತಶೆಟ್ಟಿ, ಶಿವಕುಮಾರ್‌, ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT