ಯಳಂದೂರು: ಗುಣಮಟ್ಟದ ಕ್ಯಾಬೇಜ್ (ಎಲೆಕೋಸು) ಬೆಳೆದಿರುವ ಕೃಷಿಕರು ದಿಢೀರ್ ಬೆಲೆ ಮತ್ತು ಬೇಡಿಕೆ ಕುಸಿತದಿಂದ ಕಂಗೆಟ್ಟಿದ್ದಾರೆ.

ಶ್ರಾವಣ ಮಾಸದಲ್ಲಿ ಧಾರಣೆ ಹೆಚ್ಚಾಗುವ ನಿರೀಕ್ಷೆಯಿಂದ ಕಟಾವು ಆರಂಭಿಸಿದ್ದ ರೈತರು ಮಾರಾಟ ಮಾಡಿ ನಷ್ಟದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೆಲ ಕೃಷಿಕರು ಕೊಯ್ಲಾದ ಫಸಲನ್ನು ಮಾರಲು ದಲ್ಲಾಳಿಗಳ ಮೊರೆ ಹೋಗಿದ್ದರೆ, ಮತ್ತೆ ಕೆಲವರು ಬೆಲೆ ಏರುವ ತನಕ ಗದ್ದೆಯಲ್ಲಿ ಕೋಸು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ತಾಲ್ಲೂಕಿನ ನೀರಾವರಿ ಭೂಮಿಗಳಲ್ಲಿ ಎಲೆ ಮತ್ತು ಹೂ ಕೋಸು ಬೆಳೆಯುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತಂದುಕೊಂಡುವ ಅಲ್ಫಾವಧಿಯ ಹೈಬ್ರಿಡ್ ಕ್ಯಾಬೇಜ್ ನಾಟಿ ಮಾಡಿದ್ದಾರೆ. ಒಂದು ವಾರದಿಂದ ಬೆಲೆ ಕೆ.ಜಿ.ಗೆ ಒಂದೊಂದೇ ರೂಪಾಯಿ ಇಳಿಯುತ್ತಿದ್ದು, ಬೆಲೆ ಎರಡಂಕಿಗಿಂತ ಕೆಳಗೆ ಇಳಿಯುವುದರೊಳಗೆ ಹೆಚ್ಚು ಮಾರಾಟ ಮಾಡಿ, ಬೆಲೆ ಕುಸಿತದಿಂದ ತಪ್ಪಿಸಿಕೊಳ್ಳಲು ಕೃಷಿಕರು ಸಿದ್ಧತೆ ನಡೆಸಿದ್ದಾರೆ.

‘ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಎಲೆಕೋಸು ಬೆಲೆ ₹16 ಇತ್ತು. ನಂತರ 4 ದಿನದಲ್ಲಿ ಕೆ.ಜಿ.ಗೆ ₹13ಕ್ಕೆ ಇಳಿದಿದೆ. ಮಾರುಕಟ್ಟೆಗೆ ಸಾಗಣೆ ಮಾಡಿದರೆ ತಗುಲುವ ವೆಚ್ಚವೂ ಹೆಚ್ಚಾಗುತ್ತದೆ. ಹಾಗಾಗಿ, ಹೊಲದ ಸಮೀಪದಲ್ಲಿ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತೇವೆ. ಈ ಬಾರಿ ಉತ್ತಮ ದರ್ಜೆಯ ಕೋಸು ಬೆಳೆದಿದ್ದು, ಪ್ರತಿ ಕೋಸು ಒಂದೂವರೆ ಕೆ.ಜಿ. ತೂಗುತ್ತದೆ. ಆದರೂ, ನಿರೀಕ್ಷಿಸಿದ ಬೆಲೆ ಸಿಕ್ಕಿಲ್ಲ’ ಎಂದು ಬೂದಿತಿಟ್ಟು ರೈತ ಮಿಥುನ್ ವಿವರಿಸಿದರು.

‘ಶೀತ ಹವಾಮಾನ, ತುಂತುರು ಮಳೆ ನಡುವೆ ರೈತರು ಎಕರೆಗಟ್ಟಲೆ ಬೆಳೆ ಬೆಳೆದಿದ್ದಾರೆ. ಹಗಲು ರಾತ್ರಿ ಎನ್ನದೆ ಕಾವಲು ಕಾದು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿದ್ದಾರೆ. ಬೆಳೆ ಒಣಗದಂತೆ ಸಾಕಷ್ಟು ಹಣ ವ್ಯಯಿಸಿ ಆರೋಗ್ಯಕರ ಫಸಲು ಬೆಳೆಯಲು ದುಡಿದಿದ್ದಾರೆ. ಆದರೆ, ಬೆಲೆ ₹10ಕ್ಕಿಂತ ಕಡಿಮೆಯಾದರೆ, ಹಾಕಿದ ಬಂಡವಾಳವೂ ನಷ್ಟವಾಗಲಿದೆ. ರಾಜ್ಯದಲ್ಲಿಯೂ ಕೇರಳದ ಮಾದರಿಯಲ್ಲಿ ಕೃಷಿ ನೀತಿ ಅಳವಡಿಸಬೇಕು’ ಎಂದು ಪಟ್ಟಣದ ಕೃಷಿಕ ಸುರೇಶ್ ಒತ್ತಾಯಿಸಿದರು.

ಚೇತರಿಕೆ ನಿರೀಕ್ಷೆ: ಅಧಿಕಾರಿ ‘ಮುಂದಿನ ದಿನಗಳಲ್ಲಿ ಶುಭ ಕಾರ್ಯ ಮತ್ತು ಹಬ್ಬಗಳ ಸಾಲು ಆರಂಭವಾಗುತ್ತದೆ. 15 ದಿನಗಳ ನಂತರ ಕೋಸಿಗೆ ಉತ್ತಮ ಬೆಲೆ ನಿರೀಕ್ಷಿಸಬಹುದು. ಕೊಯ್ಲನ್ನು ಕೆಲವು ದಿನಗಳ ವರೆಗೆ ಮುಂದೂಡಿ ಮಾರಾಟ ಮಾಡಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.