ಕೊಳ್ಳೇಗಾಲ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸುಮಾರು ₹ 1.20 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸಂಸದ ಆರ್.ಧ್ರವನಾರಾಯಣ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ನ.4ರಂದು ಶಾಸಕ ಎನ್.ಮಹೇಶ್ ಅವರು ಬುದ್ಧನ ಪ್ರತಿಮೆ ಇಟ್ಟು ಬುದ್ಧಪೂಜೆ ಮಾಡಿದ್ದರು. ನಾನು ಅಂದು ಬರಲು ಸಾಧ್ಯವಾಗಲಿಲ್ಲ. ಆದಕಾರಣ ಇಂದು ಭೂಮಿಪೂಜೆ ಮಾಡಿದ್ದೇನೆ. ಬಾಬಾ ಸಾಹೇಬ್ ಅವರ ಪ್ರತಿಮೆ ನಿರ್ಮಾಣಕ್ಕೆ ಪ್ರಥಮದರ್ಜೆ ಗುತ್ತಿಗೆದಾರರಾದ ಮಹದೇವ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಮಾಡುತ್ತಿದ್ದಾರೆ. ಇದು ಅವರ ವಿಶಾಲ ಮನಸ್ಥಿತಿ ಮತ್ತು ಅಂಬೇಡ್ಕರ್ ಅವರ ಮೇಲಿರುವ ಅಭಿಮಾನವನ್ನು ತೊರಿಸುತ್ತಿದೆ. ಅವರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಸಂಘದ ಪದಾಧಿಕಾರಿಗಳ ಸಹಕರದೊಂದಿಗೆ ಅಚ್ಚುಕಟ್ಟಾಗಿ ಪ್ರತಿಮೆಯು ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ನಮ್ಮ ಕಾರ್ಯಕರ್ತರು ಸದಾ ಪಕ್ಷದ ಚಟುವಟಿಕೆಯಲ್ಲಿ ಇರುವುದರಿಂದ ಎದುರಾಳಿಗಳು ಯಾರೇ ಬಂದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಪ್ರತಿ ಬೂತ್ಮಟ್ಟ ಹಾಗೂ ತಾಲ್ಲೂಕುಮಟ್ಟದಲ್ಲಿ ಉತ್ತಮವಾಗಿ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಲ್ಲಿ ಗೆಲವು ಸಾಧಿಸುವೆ ಎಂದು ವಿಶ್ವಾಸದಿಂದ ಹೇಳಿದರು.

ನಗರಸಭಾ ಸದಸ್ಯ ಮಂಜುನಾಥ್, ಅಂಬೇಂಡ್ಕರ್ ಸಂಘದ ಅಧ್ಯಕ್ಷ ನಟರಾಜು, ಸಿದ್ಧಾಥ್, ಪುಟ್ಟಬುದ್ದಿ, ರಾಜಶೇಖರ್, ಡೇರಿಮೂರ್ತಿ, ಕೆ.ಕೆ.ಮೂರ್ತಿ, ಶಿವಣ್ಣ, ಪ್ರಭು, ಮುಖಂಡರಾದ ಬಾಲರಾಜು, ರಮೇಶ್, ಶಿವಕುಮಾರ್, ವರದರಾಜು, ನಾಗರಾಜು, ಸಿದ್ದಯ್ಯ ಹಾಜರಿದ್ದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಅವಿರತ ದುಡಿಮೆ ಚುನಾಣೆಯಲ್ಲಿ ನೆರವಾಗಲಿದೆ.
-ಆರ್.ಧ್ರುವನಾರಾಯಣ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.