ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಣ್ಣ ಚಿತೆಯೊಳಗೆ ಉರಿವ ಕನಸು’ ಬಿಡುಗಡೆ ಇಂದು

Published 8 ಡಿಸೆಂಬರ್ 2023, 16:10 IST
Last Updated 8 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕವಯತ್ರಿ ಕವಿತ ಡಿ.ಎಲ್ ಅವರ ‘ಕಣ್ಣ ಚಿತೆಯೊಳಗೆ ಉರಿವ ಕನಸು’ ಕವನ ಸಂಕಲನವು ಶನಿವಾರ ನಗರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಸಾಹಿತ್ಯ ಮಿತ್ರ ಕೂಟವು ನಗರದ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆಯೋಜಿಸಿದ್ದು, ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪೊ. ವಿಜಯಕುಮಾರಿ ಎಸ್.ಕರಿಕಲ್ ಕೃತಿ ಬಿಡುಗಡೆ ಮಾಡುವರು.

ಕೃತಿ ಕುರಿತು ಸಾಹಿತಿ ಮಹಾದೇವ ಶಂಕನಪುರ ಮಾತನಾಡಲಿದ್ದು, ಸಾಹಿತ್ಯ ಮಿತ್ರ ಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅರುಣಾಚಲ ಟ್ರಸ್ಟ್‌ ಕಾರ್ಯದರ್ಶಿ ಸುಂದ್ರೇಶ್ ಕುಮಾರ್‌, ಸಾಹಿತ್ಯ ಮಿತ್ರ ಕೂಟದ ನಿರ್ದೇಶಕ ಚನ್ನಮಾದೇಗೌಡ, ಕಾರ್ಯದರ್ಶಿ ಸತೀಶ್ ಭಾಗವಹಿಸುವವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT