ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಉಳಿಸಲು ಹೋರಾಡಿದ್ದ ಛತ್ರಪತಿ ಶಿವಾಜಿ: ವೆಂಕಟರಾವ್

Last Updated 23 ಫೆಬ್ರುವರಿ 2023, 4:27 IST
ಅಕ್ಷರ ಗಾತ್ರ

ಚಾಮರಾಜನಗರ: ಭಾರತ ಪ್ರಾಚೀನ ಕಾಲದಿಂದಲೂ ಸಾಕಷ್ಟು ಧೈರ್ಯಶಾಲಿ ಪುರುಷರು ಮತ್ತು ವೀರ ಆಡಳಿತಗಾರರ ಹಿನ್ನಲೆ ಹೊಂದಿದೆ. ಅದರಲ್ಲೂ ಶಿವಾಜಿ ಮಹಾರಾಜರು ನಮ್ಮ ದೇಶವನ್ನು ಉಳಿಸಲು ಹೋರಾಡಿದ ಛತ್ರಪತಿ’ ಎಂದು ಮರಾಠ ಸಂಘದ ಅಧ್ಯಕ್ಷ ವೆಂಕಟರಾವ್ ಸಾಠೆ ಬುಧವಾರ ತಿಳಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಕಲಾ ಭವನದ ಕಚೇರಿ ಆವರಣದಲ್ಲಿ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸರಳವಾಗಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಪುರುಷರಷ್ಟೇ ಅಲ್ಲ, ಧೈರ್ಯಶಾಲಿ ಮಹಿಳಾ ಆಡಳಿತಗಾರರೂ ಇದ್ದರು. ಶಿವಾಜಿ ಮಹಾರಾಜರ ಆಡಳಿತವು ಎಲ್ಲರನ್ನೂ ಒಗ್ಗೂಡಿಸಿತ್ತು’ ಎಂದರು.

ಜಿಲ್ಲಾಡಳಿತ ಕಚೇರಿಯ ಶಿರಸ್ತೇದಾರ್‌ ರಂಗರಾಜು ಮಾತನಾಡಿ, ‘ಛತ್ರಪತಿ ಶಿವಾಜಿಯು ಅತ್ಯಂತ ಧೈರ್ಯಶಾಲಿ ಸಾಮ್ರಾಟನಾಗಿದ್ದು, ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ್ದರು. ಶಿವಾಜಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುವವರು ಇದ್ದಾರೆ. ದಕ್ಷಿಣ ಭಾರತದಲ್ಲಿ ಇಂದಿಗೂ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿಯ ನ್ಯಾಯಯುತ ಆಡಳಿತ’ ಎಂದರು.

ಹೋರಾಟಗಾರ ನಿಜಧ್ವನಿ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಮಾತನಾಡಿದರು.

ಮರಾಠ ಸಂಘದ ಉಪಾಧ್ಯಕ್ಷ ಚಂದ್ರುರಾವ್, ಸದಸ್ಯರಾದ ಶ್ರೀನಿವಾಸರಾವ್, ಮಮತಾಬಾಯಿ, ಅನಿತಾಬಾಯಿ, ಪೂಜಾಬಾಯಿ, ರವಿರಾವ್, ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT