ಆರೋಪ: ಸಂತೇಮರಹಳ್ಳಿ ಖಾಸಗಿ ಶಾಲಾ ವಾಹನ ಚಾಲಕನ ಅಜಾಗರೂಕತೆ ಮಗು ಸಾವನ್ನಪ್ಪಲು ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಹಿಂದೆ ಮುಂದೆ ಜನರು ಇದ್ದಾರೆ ಎನ್ನುವುದನ್ನು ನೋಡಿಕೊಂಡು ವಾಹನ ಚಾಲನೆ ಮಾಡಬೇಕು. ಶಾಲಾ ವಾಹನದಲ್ಲಿ ಚಾಲಕನ ಜೊತೆ ಸಿಬ್ಬಂದಿಯೊಬ್ಬರನ್ನು ಶಾಲೆ ಆಡಳಿತ ಮಂಡಳಿ ನೇಮಿಸಿ ಕೊಂಡು ಮಕ್ಕಳನ್ನು ವಾಹನಕ್ಕೆ ಹತ್ತಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಆದರೆ, ಈ ವಾಹನದಲ್ಲಿ ಚಾಲಕನೊಬ್ಬನೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಕಾರಣದಿಂದ ಇಂತಹ ಘಟನೆ ನಡೆಯಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.