ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಭೇಟಿ: ರಸ್ತೆ ಗುಂಡಿಗೆ ತೇಪೆ

ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ
Published : 9 ಆಗಸ್ಟ್ 2024, 14:36 IST
Last Updated : 9 ಆಗಸ್ಟ್ 2024, 14:36 IST
ಫಾಲೋ ಮಾಡಿ
Comments

ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಲಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ಜೋರಾಗಿ ನಡೆಯುತ್ತಿದೆ.

ಭರಚುಕ್ಕಿಯಲ್ಲಿ ಶನಿವಾರ ಸಂಜೆ 5ಕ್ಕೆ ಜಲಪಾತೋತ್ಸವಕ್ಕೆ ಸಿಎಂ ಚಾಲನೆ ನೀಡಲಿದ್ದು, ಸಿಎಂ ಸಂಚರಿಸುವ ರಸ್ತೆ ಮಾರ್ಗಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಈ ರಸ್ತೆಗಳು ಕಳೆದ ಹಲವು ವರ್ಷಗಳಿಂದ ಗುಂಡಿ ಬಿದ್ದು ಹಾಳಾಗಿವೆ. ಇದೀಗ ಮುಖ್ಯಮಂತ್ರಿ ಭೇಟಿಯ ಕಾರಣಕ್ಕೆ ಐದಾರು ಕಿ.ಮೀ ರಸ್ತೆ ದಿಢೀರ್ ಬದಲಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಜಲಪಾತವನ್ನು ನೋಡಲು ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಹಳ್ಳಕೊಳ್ಳದ ರಸ್ತೆಯಲ್ಲಿಯೇ ಪ್ರಯಾಸ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇದೀಗ ಮುಖ್ಯಮಂತ್ರಿ ಬರುತ್ತಿರುವ ಹಿನ್ನೆಲೆ ಅಧಿಕಾರಿಗಳು ರಸ್ತೆಗೆ ತೇಪೆ ಹಾಕುವ ಕಾರ್ಯವನ್ನು ಮಾಡುತ್ತಿರುವುದು ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.

ನಾವು ಮತ ಹಾಕಿ ಶಾಸಕರನ್ನು ಆಯ್ಕೆ ಮಾಡುತ್ತೇವೆ, ಶಾಸಕರು ಮುಖ್ಯಮಂತ್ರಿಯನ್ನ ಆಯ್ಕೆ ಮಾಡುತ್ತಾರೆ. ಹಾಳಾದ ರಸ್ತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿಗಳ ಅನುಕೂಲಕ್ಕೆ ಈಗ ದಿಢೀರ್ ರಸ್ತೆ ರಿಪೇರಿ ಮಾಡುತ್ತಿರುವುದು ಸರಿಯಲ್ಲ. ಅನೇಕ ಅಪಘಾತಗಳು ಈ ರಸ್ತೆಯಲ್ಲಿ ನಡೆದಿವೆ. ಶಾಲಾ ಮಕ್ಕಳಂತೂ ಹಳ್ಳಕೊಳ್ಳವನ್ನು ದಾಟಿ ಹರಸಾಹಸ ಪಡಬೇಕಾಗಿದೆ ಎಂದು ಶಿವನಸಮುದ್ರ ಗ್ರಾಮದ ಶಿವಣ್ಣ ಆರೋಪಿಸಿದರು.

ಕೊಳ್ಳೇಗಾಲ ನಗರ ಸ್ವಚ್ಛ: ಮುಖ್ಯಮಂತ್ರಿ ಅವರು ಬೆಳಿಗ್ಗೆ ಚಾಮರಾಜನಗರಕ್ಕೆ ಆಗಮಿಸಿ ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗದಲ್ಲಿ ಕೊಳ್ಳೇಗಾಲಕ್ಕೆ ಬಂದು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಾರೆ. ನಂತರ ಜಲಪಾತೋತ್ಸವಕ್ಕೆ ಹೋಗುತ್ತಾರೆ. ಹಾಗಾಗಿ ಕೊಳ್ಳೇಗಾಲದ ಪ್ರಮುಖ ರಸ್ತೆಗಳಿಗೆ ನಗರಸಭೆಯವರು ಎರಡು ದಿನಗಳಿಂದಲೂ ತೇಪೆ ಹಾಕುತ್ತಿದ್ದಾರೆ. ಜನರಿಗಾಗಿ ಸ್ವಚ್ಛತಾ ಕಾರ್ಯಗಳನ್ನು ನಗರಸಭೆಯವರು ಮಾಡುವುದಿಲ್ಲ, ಮುಖ್ಯಮಂತ್ರಿ ಬಂದರೆ ಮಾತ್ರ ಮಾಡುತ್ತಾರೆ, ಇದು ಯಾವ ನ್ಯಾಯ. ನಗರದ ರಸ್ತೆಗಳು ದುರಸ್ತಿ ಕಾಣಬೇಕಾದರೆ, ಸ್ವಚ್ಛತೆ ಕಾಪಾಡಬೇಕಾದರೆ ಮುಖ್ಯಮಂತ್ರಿ ಪ್ರತಿದಿನ ನಮ್ಮ ಗ್ರಾಮಕ್ಕೆ ಬಂದು ಹೋಗಬೇಕು ಎಂದು ಹೇಳುತ್ತಾರೆ ಮುಖಂಡ ಸಿದ್ದಪ್ಪಾಜಿ.

ಇನ್ನೊಂದೆಡೆ, ಭರಚುಕ್ಕಿ ಜಲಪಾತೋತ್ಸಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, 4 ಸಾವಿರ ಆಸನ ವ್ಯವಸ್ಥೆ, ಧ್ವನಿ-ಬೆಳಕಿನ ಸಂಯೋಜನೆಯಲ್ಲಿ ಜಲಪಾತ ಕಣ್ತುಂಬಿಕೊಳ್ಳಲು ಸಿದ್ಧತೆ ಪ್ರಗತಿಯಲ್ಲಿದೆ.

ತಾಲ್ಲೂಕಿನ ಭರಚುಕ್ಕಿ ಜಲಪಾತವನ್ನು ಸಂಪರ್ಕಿಸುವ ರಸ್ತೆ ಗುಂಡಿಗೆ ತೇಪೆ ಹಾಕಲಾಗಿದೆ
ತಾಲ್ಲೂಕಿನ ಭರಚುಕ್ಕಿ ಜಲಪಾತವನ್ನು ಸಂಪರ್ಕಿಸುವ ರಸ್ತೆ ಗುಂಡಿಗೆ ತೇಪೆ ಹಾಕಲಾಗಿದೆ
ತಾಲೂಕಿನ ಭರಚುಕ್ಕಿ ಜಲಪಾತದ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ ಜೋರಾಗಿ ನಡೆಯುತ್ತಿದೆ
ತಾಲೂಕಿನ ಭರಚುಕ್ಕಿ ಜಲಪಾತದ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ ಜೋರಾಗಿ ನಡೆಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT