ಬಲಿಪಾಡ್ಯಮಿ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಗೋಪೂಜೆ

ಚಾಮರಾಜನಗರ: ಬಲಿಪಾಡ್ಯಮಿ ಅಂಗವಾಗಿ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ಗೋವಿಗೆ ಪೂಜೆಯನ್ನು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಶುಕ್ರವಾರ ಸಂಜೆ ಗೋಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ರಾಮಚಂದ್ರ, ಅರ್ಚಕರಾದ, ಭಾರದ್ವಾಜ್, ಅನಿಲ್ ಕುಮಾರ್ ದೀಕ್ಷಿತ್, ಚಿಕ್ಕಣ್ಣ, ಚಾಮರಾಜೇಶ್ವರ ಪ್ರಧಾನ ಅರ್ಚಕರಾದ ಅಣ್ಣಾಜಿ, ಮಹೇಶ್, ಚಿಕ್ಕ ರಾಜು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಇತರರು ಇದ್ದರು.
ಚಾಮರಾಜನಗರ: ಸಮೀಪದ ಹರಳುಕೋಟೆಯ ಜನಾರ್ದನಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಸಂಜೆ ಗೋಪೂಜೆ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್ ಪುರಿ, ಮುಖಂಡ ವೆಂಕಟರಮಣ ಸ್ವಾಮಿ ಪಾಪು ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.