ಗುರುವಾರ , ಮಾರ್ಚ್ 23, 2023
30 °C

ಮಹದೇಶ್ವರ ಬೆಟ್ಟ: ರಾತ್ರಿ ತಂಗಲು ಅವಕಾಶ, ದರ್ಶನ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ (ಜುಲೈ 8) ಜಾರಿಗೆ ಬರುವಂತೆ ಸ್ವಾಮಿಯ ದರ್ಶನ ಅವಧಿಯನ್ನು ಪರಿಷ್ಕರಿಸಲಾಗಿದ್ದು, ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 

ಭಕ್ತರಿಗೆ ರಾತ್ರಿ ಬೆಟ್ಟದಲ್ಲಿ ತಂಗಲೂ ಅವಕಾಶ ಕಲ್ಪಿಸಲಾಗಿದೆ. ಗುರುವಾರ ರಾತ್ರಿಯಿಂದಲೇ ಕೊಠಡಿಗಳನ್ನು ಕಾಯ್ದಿರಿಸಲು ಅನುವು ಮಾಡಲಾಗಿದೆ. ಆನ್‌ಲೈನ್‌ ಮೂಲಕ (www.mmhillstemple.com) ಹಾಗೂ ನೇರವಾಗಿ ಬೆಟ್ಟಕ್ಕೆ ಬಂದು ಕೊಠಡಿಗಳನ್ನು ಕಾಯ್ದಿರಿಸಬಹುದು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ದಾಸೋಹ, ಸೇವೆ ಇಲ್ಲ:  ದರ್ಶನ ಅವಧಿ ವಿಸ್ತರಿಸಲಾಗಿದ್ದರೂ, ದೇವಾಲಯದಲ್ಲಿ ದಾಸೋಹ ವ್ಯವಸ್ಥೆ, ಮುಡಿ ಸೇವೆ ಸೇರಿದಂತೆ ಇತರ ಸೇವೆಗಳು, ವಿಶೇಷ ಪೂಜೆ, ಉತ್ಸವಗಳು ಹಾಗೂ ಪ್ರಸಾದ ವಿತರಣೆ ಇನ್ನೂ ಆರಂಭಿಸಿಲ್ಲ. ಬೆಟ್ಟದಲ್ಲಿ ಆಹಾರಕ್ಕಾಗಿ ಭಕ್ತರು ಖಾಸಗಿ ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿದೆ.

‘ಭಕ್ತರು ಸುರಕ್ಷಿತ ಅಂತರ‌ ಕಾಪಾಡುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಕಡ್ಡಾಯ. ಬೆಟ್ಟದಲ್ಲಿ ಜನಸಂದಣಿಗೆ ಅವಕಾಶ ಇಲ್ಲ’ ಎಂದು ಜಯವಿಭವ ಸ್ವಾಮಿ ಅವರು ಹೇಳಿದ್ದಾರೆ. 

ಮಾಹಿತಿಗೆ ಸಹಾಯವಾಣಿ ಸಂಖ್ಯೆ 1860 425 4350 ಗೆ ಕರೆ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು