ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಟೆಲ್‌ ಉದ್ಯಮ ಬೆಳೆದರೆ ಉದ್ಯೋಗ ಸೃಷ್ಟಿ: ಚಂದ್ರಶೇಖರ ಹೆಬ್ಬಾರ್

ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉದ್ಘಾಟನೆ
Published 26 ಮಾರ್ಚ್ 2024, 16:15 IST
Last Updated 26 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರವಾಸೋದ್ಯಮ ಬೆಳೆದರೆ ಹೋಟೆಲ್‌ ಉದ್ಯಮಗಳು ಹೋಟೆಲ್ ಉದ್ಯಮ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಬಿ.ಚಂದ್ರಶೇಖರ ಹೆಬ್ಬಾರ್ ಮಂಗಳವಾರ ಹೇಳಿದರು. 

ನಗರದಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಸಂಘದ ಬಗ್ಗೆ ಹೆಚ್ಚು ಒಲವು ಇದ್ದರಷ್ಟೇ ಸಂಘ ಬೆಳೆಸಲು ಸಾಧ್ಯ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಹೆಚ್ಚಿವೆ. ಅಲ್ಲಿ ಇರುವ ಹೋಟೆಲ್ ಉದ್ಯಮಿಗಳನ್ನು ಸಂಘದ ಸದಸ್ಯರಾಗಿ ಮಾಡಿದರೆ ಸಂಘವು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಹೋಟೆಲ್ ಉದ್ಯಮ ಬಹಳಷ್ಟು ಜನರಿಗೆ ದಾರಿದೀಪವಾಗಿದೆ. ಇದರಲ್ಲಿ ಕಷ್ಟವೂ ಇದೆ, ಸುಖವೂ ಇದೆ. 30 ವರ್ಷಗಳ ಹಿಂದೆ ಹೋಟೆಲ್‌ ಉದ್ಯಮದಲ್ಲಿ ತೊಡಗಿದ್ದವರು ಕಡಿಮೆ. ಈಗ ಉದ್ಯಮ ಬಹಳಷ್ಟು ಬೆಳೆದಿದೆ. ಉದ್ಯಮವು ನುರಿತ ಕೆಲಸಗಾರರ ಕೊರತೆ ಎದುರಿಸುತ್ತಿದೆ. ಇಲ್ಲಿ ಚೆನ್ನಾಗಿರುವುದನ್ನು ಯಾರೂ ಹೇಳುವುದಿಲ್ಲ. ತಪ್ಪು ಕಂಡುಹಿಡಿಯುವವರೇ ಹೆಚ್ಚಿರುತ್ತಾರೆ. ಯಾವುದೇ ಸದಸ್ಯೆಗಳು ಬಂದರೂ ಅದನ್ನು ಪರಿಹಾರ ಮಾಡಬೇಕಾದದ್ದು ಸಂಘದ ಕರ್ತವ್ಯ’ ಎಂದು ತಿಳಿಸಿದರು.

ಹೋಟೆಲ್‌ ಉದ್ಯಮಿ ನಿಜಗುಣ ರಾಜು ಮಾತನಾಡಿ, ‘ಈ ಉದ್ಯಮ ಕಠಿಣವಾದುದು. ಅದರಲ್ಲಿ ಕೆಲಸಗಾರರ ಕೊರತೆ ಇದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇದೆ. ಜೊತೆಗೆ ಕೈಗಾರಿಕಾ ಪ್ರದೇಶ ಬೆಳೆಯುತ್ತಿರುವುದರಿಂದ ಹೋಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ’ ಎಂದು ಹೇಳಿದರು. 

ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಜಿ.ಕೆ.ಶೆಟ್ಟಿ ಮಾತನಾಡಿ,  ‘ರಾಜ್ಯ ಸಂಘದಿಂದ ಗ್ರಾಮಾಂತರ ಮಟ್ಟದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅನುತ್ತೀರ್ಣರಾದವರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಕೊಡುವ ಉದ್ದೇಶ ಇದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚು ಇರುವುದರಿಂದ ಹೋಟೆಲ್ ಉದ್ಯಮಿಗಳ ಸಭೆ ಕರೆಯಲಾಗುವುದು. ರಾಜ್ಯ ಮಟ್ಟದ ಸಮ್ಮೇಳನ ಕೂಡ ಆಯೋಜಿಸಲಾಗುವುದು’ ಎಂದರು. 

ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಂದ್ಯಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಂಘದ ಉಪಾಧ್ಯಕ್ಷ ಮಧುಕರಶೆಟ್ಟಿ, ರವಿಶಾಸ್ತ್ರಿ, ಕೋಶಾಧಿಕಾರಿ ಎಂ.ವಿ.ರಾಘವೇಂದ್ರ, ಮೈಸೂರು ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಪ್ರತಾಪ್, ಪದಾಧಿಕಾರಿಗಳಾದ ವಿಜಯ್ ಕುಲಾಲ್, ಸಿ.ಒ.ಪಾಪಣ್ಣ, ಶ್ರೀನಿವಾಸರಾವ್, ಜಿ.ಅಂಕಶೆಟ್ಟಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT