ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

Published 2 ಜೂನ್ 2024, 15:04 IST
Last Updated 2 ಜೂನ್ 2024, 15:04 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಟಿ.ಸಿ.ಹುಂಡಿ ಗ್ರಾಮದಲ್ಲಿ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ.

 ಗ್ರಾಮದ ಕವಿತಾ(37) ಮೃತಪಟ್ಟವರು. ಇವರನ್ನು ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮದ ಚೇತನ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ಚಿನ್ನ ಸೇರಿ ವರದಕ್ಷಿಣೆ ನೀಡಲಾಗಿತ್ತು.

ಮದುವೆ ನಂತರ ಎರಡು ಲಕ್ಷ ವರದಕ್ಷಿಣೆ ತರಬೇಕೆಂದು ಗಂಡ ಚೇತನ್, ಆತ್ತೆ ಸಿದ್ದರಾಜಮ್ಮ, ಮಾವ ಸೋಮಯ್ಯ, ಮೈದ ಕೃಷ್ಣಮೂರ್ತಿ, ಚೇತನ್ ಚಿಕ್ಕಮ್ಮ ಹಾಗೂ ಆತ್ತೆ ಮಕ್ಕಳಾದ ಭುವನ್, ರಾಘವೇಂದ್ರ ಇವರು ಒಟ್ಟಾಗಿ ಸೇರಿ ಚಿತ್ರೆಹಿಂಸೆ ನೀಡುತ್ತಿದ್ದರು.

ಕವಿತಾ ಮನೆಯಿಂದ ತಪ್ಪಿಸಿಕೊಂಡು ಬಂದು ಸಾಂತ್ವನ ಕೇಂದ್ರಕ್ಕೆ ಬಂದು ದೂರು ನೀಡಿದ್ದರು. ಸಾಂತ್ವನ ಕೇಂದ್ರದವರು ಕವಿತಾಳಿಗೆ ಧೈರ್ಯ ತುಂಬಿ ನಿಮಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ಯಾವುದೇ ನ್ಯಾಯ ದೊರಕದ ಕಾರಣ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದಿರುವಾಗ ಮೇಲ್ಛಾವಣಿಗೆ ಸೀರೆ ಕಟ್ಟಿ ನೇಣು ಹಾಕಿಕೊಂಡಿದ್ದಾರೆ.

ಮೃತಳ ಸಹೋದರ ಚೆಲುವರಾಜು ನಗರ ಪೊಲೀಸ್ ಠಾಣೆಗೆ ದೂರು ನೀಡಿ,  ಸಾವಿಗೆ ಕಾರಣರಾದ ಏಳು ಮಂದಿ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಪಿಎಸ್ಐ ಮಹೇಶ್ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT