ಚಾಮರಾಜನಗರ: ಪ್ರವಾದಿ ಮಹ ಮ್ಮದ್ ಜನ್ಮ ದಿನದ ಅಂಗವಾಗಿ ಜಿಲ್ಲೆಯಾ ದ್ಯಂತ ಮುಸ್ಲಿಮರು ಮಂಗಳವಾರ ಸಂಭ್ರಮ, ಸಡಗರದಿಂದ ಸರಳವಾಗಿ ಈದ್ ಮಿಲಾದ್ ಆಚರಿಸಿದರು.

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸಾಮೂಹಿಕ ಮೆರವಣಿಗೆ ಯನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಹಾಗಾಗಿ, ಹಬ್ಬದ ಆಚರಣೆ, ಮಸೀದಿ, ದರ್ಗಾ, ಮನೆಗಳಿಗೆ ಸೀಮಿತವಾಗಿತ್ತು. ಕೆಲವು ಮಸೀದಿಗಳಲ್ಲಿ ಮಂಗಳವಾರ ಸಂಜೆ ಹಬ್ಬದ ಅಂಗವಾಗಿ ವಿಶೇಷ ಪ್ರವಚನ ನಡೆಯಿತು.

ಹಿರಿಯರು, ಮಹಿಳೆಯರು, ಮಕ್ಕಳು ಮನೆಗಳಲ್ಲೇ ಪ್ರಾರ್ಥನೆ ಮತ್ತು ಕುರ್ ಅನ್ ಪಠಣದಲ್ಲಿ ತೊಡಗಿಕೊಂಡರು. ಉಳಿದವರು ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ದರ್ಗಾಗಳಿಗೆ ಭೇಟಿ ನೀಡಿದ ಮುಸ್ಲಿಂ ಸಮುದಾಯದವರು ಅಲ್ಲೂ ಪ್ರಾರ್ಥನೆ ಸಲ್ಲಿಸಿದರು.

ಸಂದೇಶ: ಸಂಜೆ ಮಸೀದಿಗಳಲ್ಲಿ ನಡೆದ ಪ್ರವಚನದಲ್ಲಿ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಅವರ ತತ್ವ, ಸಿದ್ಧಾಂತ, ಆದರ್ಶಗಳ ಸಂದೇಶಗಳನ್ನು ಸಮುದಾಯದವರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.