ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಚುನಾವಣಾ ವೆಚ್ಚ: ಬೋಸ್ ₹46.57 ಲಕ್ಷ, ಬಾಲರಾಜು ₹26.95 ಲಕ್ಷ

Published 19 ಏಪ್ರಿಲ್ 2024, 14:03 IST
Last Updated 19 ಏಪ್ರಿಲ್ 2024, 14:03 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಏಪ್ರಿಲ್ 15 ರವರೆಗೆ ಮಾಡಿರುವ  ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, 14 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ಸುನಿಲ್‌ ಬೋಸ್‌ ಅವರು ಇಲ್ಲಿಯವರೆಗೆ ಅತಿ ಹೆಚ್ಚು ₹46.57 ಲಕ್ಷ ವೆಚ್ಚ ಮಾಡಿದ್ದಾರೆ. 

ಬುಧವಾರ ನಡೆದ ಎರಡನೇ ವೆಚ್ಚ ಪರಿಶೀಲನಾ ಸಭೆ ನಡೆದಿದ್ದು, ಅಧಿಕಾರಿಗಳು ವೆಚ್ಚ ವಿವರಗಳನ್ನು ಪರಿಶೀಲಿಸಿದರು. 

ಬಿಜೆ‌ಪಿ ಅಭ್ಯರ್ಥಿ ಎಸ್‌.ಬಾಲರಾಜು ಅವರು ಇಲ್ಲಿಯವರೆಗೆ ₹26,95,763 ವೆಚ್ಚಮಾಡಿದ್ದಾರೆ. ಬಿಎಸ್‌ಪಿಯ ಎಂ. ಕೃಷ್ಣಮೂರ್ತಿ ₹2,44,100, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ. ಕೃಷ್ಣ ₹12,500, ಕರ್ನಾಟಕ ಜನತಾ ಪಾರ್ಟಿ (ಕೆ.ಜೆ.ಪಿ) ಅಭ್ಯರ್ಥಿ ನಿಂಗರಾಜು. ಎಸ್ ₹17,375, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನ ಕುಮಾರ್. ಬಿ ₹15,020, ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ಅಭ್ಯರ್ಥಿ ಮಹೇಶ್. ಎಂ ಅವರು ₹14,375, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಸುಮ. ಎಸ್. ₹48,690, ಪಕ್ಷೇತರ ಅಭ್ಯರ್ಥಿಗಳಾದ ಎನ್.ಅಂಬರೀಷ್, ನಿಂಗರಾಜು. ಜಿ ಪ್ರದೀಪ್ ಕುಮಾರ್. ಎಂ, ಮಹದೇವಸ್ವಾಮಿ. ಬಿ.ಎಂ, ಮತ್ತು ಎಚ್‌.ಕೆ.ಸ್ವಾಮಿ ಅವರು ತಲಾ ₹12,500, ಜಿ.ಡಿ. ರಾಜಗೋಪಾಲ ಅವರು ₹17,980 ವೆಚ್ಚ ಮಾಡಿರುವ ಬಗ್ಗೆ ವಿವರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT